ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ದೇಸಿ ಸಂಸ್ಕೃತಿ ಮೂಲೆಗುಂಪು ಮಾಡಬೇಡಿ: ದಾವಣಗೆರೆ

Mainashree
Updated On : 21 Apr 2014, 10:02 am

ಕಂಪ್ಲಿ: ವಿದೇಶಿ ಸಂಸ್ಕೃತಿಗೆ ಮಾರು ಹೋಗಿ ದೇಸಿ ಸಂಸ್ಕೃತಿ ಮೂಲೆಗುಂಪು ಮಾಡುವುದು ತರವಲ್ಲ ಎಂದು ಕುಂಬಳೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಸುಮತಿ ಜಯಪ್ಪ ದಾವಣಗೆರೆ ಹೇಳಿದರು.
ಸಮೀಪದ ದೇವಸಮುದ್ರ ತುರುಮುಂದಿ ಬಸವೇಶ್ವರ ದೇವಸ್ಥಾನದಲ್ಲಿ ತುರುಮುಂದಿ ಬಸವೇಶ್ವರ ಯುವಕ ಸಂಘ ಶನಿವಾರ ಹಮ್ಮಿಕೊಂಡಿದ್ದ ದುಶ್ಚಟ ನಿರ್ಮೂಲನೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಮಹಿಳೆಯರು ಉಳಿತಾಯ ಮನೋಭಾವ ಬೆಳೆಸಿಕೊಳ್ಳುವ ಜೊತೆಗೆ ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕು. ಕಾಲಹರಣಕ್ಕಾಗಿ ಧಾರಾವಾಹಿಗಳನ್ನು ವೀಕ್ಷಿಸುವುದು ಸಹ ದುಶ್ಚಟ. ಶ್ರೀಮಂತಿಕೆ, ಭೋಗವಿಲಾಸ ಜೀವನದಿಂದ ಯುವಜನತೆ ಸದೃಢ ದೇಹ, ಮನಸ್ಸು, ಆಲೋಚನೆಗಳಿಂದ ವಿಮುಖರಾಗುತ್ತಿದ್ದಾರೆ. ಯುವಜನತೆ ಕ್ಷಣಿಕ ಸುಖಕ್ಕಾಗಿ ಹಾತೊರೆಯಬಾರದು ಎಂದರು.
ಕಂಪ್ಲಿ ಕಲ್ಮಠದ ಅಭಿನವ ಪ್ರಭು ಸ್ವಾಮೀಜಿ ಮಾತನಾಡಿದರು. ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕೌಟುಂಬಿಕ ಸಂಬಂಧಗಳಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿದ್ದು, ಸಮಾಜದಲ್ಲಿ ನೈತಿಕತೆ ಮರೆಯಾಗುತ್ತಿದೆ ಎಂದರು.
ಎಪಿಎಂಸಿ ನಿರ್ದೇಶಕ ಅಳ್ಳಳ್ಳಿ ವೀರೇಶ್, ಜಿಪಂ ಮಾಜಿ ಅಧ್ಯಕ್ಷೆ ಸುಮಂಗಳಮ್ಮ ಗುಬಾಜಿ, ಮುಖಂಡರಾದ ಕಡೆಮನಿ ಪಂಪಾಪತಿ, ಚಂದ್ರಶೇಖರ ಗೌಡ, ಮಲ್ಲಿಗೌಡ, ಗಣೇಶಗೌಡ, ಬಸವನಗೌಡ, ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement