ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮನಃಶುದ್ಧಿಗೆ ಧ್ಯಾನ ಮಾಡಿ: ಪ್ರಭು ಶ್ರೀ

Mainashree
Updated On : 21 Apr 2014, 10:02 am

ಕಂಪ್ಲಿ: ಮನಃಶುದ್ಧಿಗಾಗಿ ಸಾಮೂಹಿಕ ಭಜನೆ, ಪ್ರಾರ್ಥನೆ, ಧ್ಯಾನಾದಿಗಳಲ್ಲಿ ತಲ್ಲೀನರಾಗಬೇಕೆಂದು ಕಂಪ್ಲಿ ಕಲ್ಮಠದ ಅಭಿನವ ಪ್ರಭು ಸ್ವಾಮೀಜಿ ಹೇಳಿದರು.
ಇಲ್ಲಿನ ಹೇರೂರು ವಿರೂಪನಗೌಡ ತಾತ ಮಠದಲ್ಲಿ ಭಾನುವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಮಡಿ ತೇರು ಎಳೆಯುವ, ಧರ್ಮ ಜಾಗೃತಿ ಸಭೆ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಆಧುನಿಕ ಒತ್ತಡದ ಜೀವನ ಹಲವು ಮಾರಣಾಂತಿಕ ಕಾಯಿಲೆಗಳಿಗೆ ದಾರಿ ಮಾಡಿಕೊಟ್ಟಿದೆ. ಸುಖ, ನೆಮ್ಮದಿ ಬದುಕಿಗಾಗಿ, ಧ್ಯಾನ, ಭಜನೆಗಳಲ್ಲಿ ತೊಡಗಿ ಎಂದರು. ವಿರೂಪನಗೌಡ ತಾತ ಭಜನಾ ಮಂಡಳಿಯಿಂದ ಪುರಸಭೆ ಸದಸ್ಯ ಬಿ. ನಾಗರಾಜ್ ಅವರನ್ನು ಗೌರವಿಸಲಾಯಿತು. ಹೇರೂರು ವಿರೂಪನಗೌಡ ತಾತ ಮಠ ಸಮಿತಿ ಅಧ್ಯಕ್ಷ ಉಬಾಳೆ ತುಳಸಿ ರಾಮಚಂದ್ರ, ಅರ್ಚಕ ಸಿ.ಎಂ. ವೀರಯ್ಯ ಸ್ವಾಮಿ, ಅಂಚೆ ವಲಿಸಾಬ್, ಬಿ. ಸಿದ್ದಪ್ಪ ಬಿಂಗಿ ವೆಂಕೋಬಣ್ಣ, ಪದಗುಂಡಿ ದೊಡ್ಡ ಬಸಪ್ಪ, ಯು. ವೆಂಕೋಬಪ್ಪ, ಉಡೇಗೊಳ್ ಶಿವರಾಮ್, ಬಸಪ್ಪ, ಯು. ನಾರಾಯಣಪ್ಪ, ನಡವಿ ಬಸವರಾಜ್, ಅಯ್ಯಪ್ಪ, ಮಡಿವಾಳರ ಹುಲುಗಪ್ಪ, ವಾಲ್ಮೀಕಿ ಈರಣ್ಣ, ಲಬೇದ ಅಯ್ಯಪ್ಪ ಇದ್ದರು. ವಿರೂಪನಗೌಡ ತಾತ ಭಜನಾ ಮಂಡಳಿ ವತಿಯಿಂದ ಅಖಂಡ ಭಜನಾ ಕಾರ್ಯಕ್ರಮ ಜರುಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement