ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಿದ್ಧಗಂಗಾ ಶ್ರೀ ಸುಧಾರಕ

Mainashree
Updated On : 21 Apr 2014, 10:02 am

ಕಂಪ್ಲಿ: ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳು ಕ್ರಿಯಾಶೀಲ ಮನೋವೃತ್ತಿಯುಳ್ಳ ಸಮಾಜ ಸುಧಾರಕರಾಗಿದ್ದಾರೆ ಎಂದು ಕೊಪ್ಪಳ ಗವಿಸಿದ್ದೇಶ್ವರ ಸಂಸ್ಥಾನ ಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶಿವಕುಮಾರ ಸ್ವಾಮೀಜಿ ಗುರುವಂದನಾ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ನಡೆದಾಡುವ ದೇವರು ಸಿದ್ದಗಂಗಾ ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿಗಳ 107ನೇ ಜನ್ಮ ದಿನೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಕೆ.ಬಿ. ಸಿದ್ದಲಿಂಗಪ್ಪ ದಾಸೋಹ ಕುರಿತು ಉಪನ್ಯಾಸ ನೀಡಿ, ದುಡಿಮೆ ಮತ್ತು ಸಂಪತ್ತಿನ ಗಳಿಕೆ ಜೀವನದ ಸುಖದ ಮೂಲವಲ್ಲ. ಕಾಯಕದ ಹಣ ದಾಸೋಹದಲ್ಲಿ ಲೀನವಾಗಬೇಕು. ಅನ್ನ ಹಾಗೂ ಜ್ಞಾನ ದಾಸೋಹ ಜೀವನದಲ್ಲಿ ನೆಮ್ಮದಿ, ಸುಖ ನೀಡುತ್ತವೆ ಎಂದರು.
ಪತ್ರಿಕಾ ಸಂಪಾದಕ ಸಿ.ಎಚ್. ನಾರಿನಾಳ್ ಕಾಯಕ ಕುರಿತು ಮಾನತಾಡಿದರು. ಹೆಬ್ಬಾಳು ಬೋಳೋಡಿ ಬಸವೇಶ್ವರ ಸಂಸ್ಥಾನ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಶಿವಕುಮಾರ ಸ್ವಾಮಿಗಳ ಜನ್ಮ ದಿನೋತ್ಸವ ಉದ್ಘಾಟಿಸಿದರು. ಗುರುವಂದನಾ ಸಮಿತಿ ಅಧ್ಯಕ್ಷ ಕ.ಮ. ಹೇಮಯ್ಯಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಳ್ಳಾರಿ ಸಾಯಿ ಆರೋಗ್ಯ ಕೇಂದ್ರದ ಡಾ. ಟಿ.ಆರ್. ಶ್ರೀನಿವಾಸ್, ಸಾಂಗತ್ರಯ ಸಂಸ್ಕೃತ ಪಾಠಶಾಲೆ ಅಧ್ಯಕ್ಷ ಜವಳಿ ಚನ್ನಬಸಪ್ಪ, ವೀರಶೈವ ಸಂಘದ ಅಧ್ಯಕ್ಷ ಪಿ. ಮೂಕಯ್ಯಸ್ವಾಮಿ, ಮುಖಂಡ ಕೆಂಚಪ್ಪ, ಜಾಫರ್‌ಸಾಬ್ ಕಾರ್ಯಕ್ರಮ ಆಯೋಜಕರಾದ ಸಾಂಗತ್ರಯ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಎಂ.ಎಸ್. ಶಶಿಧರ ಶಾಸ್ತ್ರಿಗಳು, ವಿಜಯ ಮಹಾಂತೇಶ್ವರ ಖಾನಾವಳಿ ಮಾಲೀಕ ಶಿವಸಂಗಪ್ಪ ಕೋಟಿ, ಗುರುವಂದನ ಸಮಿತಿಯ ಜಿ.ಆರ್. ಹನುಮಂತರೆಡ್ಡಿ ಮಾತನಾಡಿದರು. ಮುಕ್ಕುಂದಿ ಬಸವರಾಜ್ ಸ್ವಾಗತಿಸಿದರು. ನೂಲ್ವಿ ಮಹಾಂತೇಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement