ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕನಕರು ಒಂದು ಜಾತಿಗೆ ಸೀಮಿತವಾಗಿಲ್ಲ

Lingaraj Badiger
Updated On : 22 Apr 2014, 11:29 am

ಹೊಸಪೇಟೆ: ಕನಕದಾಸರು ಒಂದು ಜಾತಿ, ಧರ್ಮ, ಪಂಥಕ್ಕೆ ಸೀಮಿತರಾದವರಲ್ಲ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಬಿ.ಜಿ. ಕನಕೇಶಮೂರ್ತಿ ಹೇಳಿದರು.
ನಗರದ ಥಿಯೋಸಾಫಿಕಲ್ ಮಹಿಳಾ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ 'ಮುತ್ತು ಬಂದಿದೆ ಕೇರಿಗೆ' ಎಂಬ ಕನಕದಾಸರ ಕುರಿತು ಉಪನ್ಯಾಸ ನೀಡಿದರು.
ಕನಕದಾಸರ ಕೀರ್ತನೆಗಳ ವೈಶಿಷ್ಟ್ಯ ಭಕ್ತಿ, ಜ್ಞಾನ, ವೈರಾಗ್ಯವಾಗಿತ್ತು. ಆರುನೂರುಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿ ಪುರಂದರ ದಾಸರನ್ನು ಮೀರಿಸಿದ್ದಾರೆಂದರು.
ಮೋಹನ ತರಂಗಿಣಿ, ನಳ ಚರಿತ್ರೆ, ಹರಿಭಕ್ತ ಸಾರ, ಹರಿಧಾನ್ಯ ಚರಿತೆ ಇವರ ಮುಖ್ಯ ಕೃತಿಗಳಾಗಿವೆ. ಕನಕದಾಸರ ಕೀರ್ತನೆಗಳನ್ನು ವಿದ್ಯಾರ್ಥಿಗಳು ಓದುವ ಮೂಲಕ ಅವರನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಉಪನ್ಯಾಸಕ ನಾಗರಾಜ್ ಪತ್ತಾರ್ ಮಾತನಾಡಿ, ಕನಕದಾಸರ ದೃಷ್ಟಿಯಲ್ಲಿ ವೈರಾಗ್ಯವೆಂದರೆ ನಮ್ಮನ್ನು ನಾವು ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವುದೇ ಆಗಿದೆ. ಸಾಹಿತ್ಯದ ಜತೆಗೆ ಸಂಗೀತವೂ ಮುಖ್ಯ ಎನ್ನುವುದಕ್ಕೆ ಈ ಕಾರ್ಯಕ್ರಮದ ಆಯೋಜನೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ. ಮಂಜುಳಾ, ಸಂಚಾಲಕ ಡಾ. ಕೆ. ವೆಂಕಟೇಶ್, ವಕೀಲ ಎ. ಕರುಣಾನಿಧಿ, ಗಾಯಕಿ ಸುಜಾತಾ ಇತರರು ಭಾಗವಹಿಸಿದ್ದರು. ಬಳಿಕ ನಾಗರಾಜ ಪತ್ತಾರ್ ಮತ್ತು ತಂಡದವರು ಕನದಾಸರ ಕೀರ್ತನೆಗಳ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗೀತಾ ಪ್ರಾರ್ಥಿಸಿದರು. ಸುಜಾತಾ ರೇವಣಸಿದ್ಧಪ್ಪ ಸ್ವಾಗತಿಸಿ, ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement