ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪೊಲೀಸ್ ಗಸ್ತಿಗೆ ಮನವಿ

Lingaraj Badiger
Updated On : 22 Apr 2014, 11:28 am

ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರದಲ್ಲಿರುವ ಗಂಗಾವತಿ ಭೀಮಪ್ಪನವರ್ ಸರ್ಕಾರಿ ಕಾಲೇಜಿನ ಆವರಣ, ಕ್ರೀಡಾಂಗಣದಲ್ಲಿ ಕೆಲ ಪುಡಾರಿಗಳು, ಮದ್ಯಸೇವಕರು ನಿತ್ಯ ರಾತ್ರಿ ಮದ್ಯಸೇವನೆ ಮಾಡಿ ಎಲ್ಲೆಂದರಲ್ಲಿ ಮದ್ಯ ಬಾಟಲಿ ಒಡೆದು ಹಾಕಿ ಕಾಲೇಜಿನ ಆವರಣ ಕಲುಷಿತಗೊಳಿಸುತ್ತಿದ್ದಾರೆ. ರಾತ್ರಿ ವೇಳೆ ಪೊಲೀಸ್ ಗಸ್ತು ಮೂಲಕ ಕಾಲೇಜಿನ ಪಾವಿತ್ರ್ಯ ಕಾಪಾಡಬೇಕೆಂದು ಪಟ್ಟಣದ ಶ್ರೀಸ್ವಾಮಿ ವಿವೇಕಾನಂದ ಟ್ರಸ್ಟ್ ಪಟ್ಟಣದ ಪಿಎಸೈಗೆ ಮನವಿ ಮಾಡಿದೆ. ಆಟದ ಮೈದಾನದಲ್ಲಿ ಬಿಯರ್, ವಿಸ್ಕಿ ಬಾಟಲಿಗಳು ಬಿದ್ದಿರುತ್ತವೆ. ಇದರಿಂದ ನಿತ್ಯ ವಾಯುವಿಹಾರ, ಯೋಗ ಮಾಡುವವರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಮದ್ಯ ಸೇವಿಸಿದ್ದಲ್ಲದೆ ಬಾಟಲಿಗಳನ್ನು ಒಡೆಯುತ್ತಾರೆ. ಇದರಿಂದ ವಾಯುವಿಹಾರ, ಆಟೋಟಗಳಲ್ಲಿ ಭಾಗವಹಿಸುವವರ ಕಾಲುಗಳಿಗೆ ಬಾಟಲಿ ಚೂರುಗಳು ಚುಚ್ಚಿ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ರಾತ್ರಿ ಗಸ್ತು ಹಾಕಿ ಪುಂಡರ ಹಾವಳಿ ತಪ್ಪಿಸಬೇಕೆಂದು ಟ್ರಸ್ಟ್ ಮನವಿ ಮಾಡಿಕೊಂಡಿದೆ.
24ಕ್ಕೆ ಮಿನಿ ಉದ್ಯೋಗ ಮೇಳ
ಬಳ್ಳಾರಿ: ಕೌಶಲ್ಯ ಆಯೋಗ, ಉದ್ಯೋಗ ಮತ್ತು ತರಬೇತಿ ಇಲಾಖೆ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಏ. 24ರ ಬೆಳಗ್ಗೆ 10ರಿಂದ 2ರ ವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ನವಭಾರತ್ ಫರ್ಟಿಲೈಸರ್ಸ್, ಕಿರ್ಲೋಸ್ಕರ್, ಗ್ರೀನ್ ಗೋಲ್ಡ್ ಸೆಕ್ಯುರಿಟೀಸ್, ನಾರಾಯಣ ಪಿಯು ಕಾಲೇಜು, ಕೊಟ್ಟೂರೇಶ್ವರ ಶಾಲೆ ಉದ್ಯೋಗದಾತರು ಪಾಲ್ಗೊಳ್ಳಲಿದ್ದಾರೆ. ಮೆಕ್ಯಾನಿಕ್, ಎಲೆಕ್ಟ್ರಿಕಲ್‌ನಲ್ಲಿ ಡಿಪ್ಲೊಮಾ, ಆಂಗ್ಲ ಭಾಷೆ ಜ್ಞಾನ ಹೊಂದಿರುವ ಬಿಎ, ಬಿಎಡ್ ವಿದ್ಯಾರ್ಥಿಗಳು, ಎಂಎಸ್‌ಡಬ್ಲ್ಯೂ, ಯಾವುದೇ ಪದವಿ, ಪಿಯುಸಿ ವಿದ್ಯಾರ್ಥಿಗಳು   ಪಾಲ್ಗೊಳ್ಳಬಹುದು. ಆಸಕ್ತರು ವಿದ್ಯಾರ್ಹತೆ ಪ್ರಮಾಣಪತ್ರ, ಸ್ವವಿವರ(ರೆಸ್ಯೂಮ್)ದೊಂದಿಗೆ ಮೇಳದಲ್ಲಿ ಭಾಗವಹಿಸಬಹುದು. ಮಾಹಿತಿಗೆ  ಮೊ. 9036422052, 9844444958 ಸಂಪರ್ಕಿಸಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪಿ.ಎಸ್. ಹಟ್ಟೆಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement