ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬೆಳೆ ನಷ್ಟ: ಅಧಿಕಾರಿಗಳಿಂದ ಪರಿಶೀಲನೆ

Lingaraj Badiger
Updated On : 22 Apr 2014, 11:28 am

ಕನ್ನಡಪ್ರಭ ವಾರ್ತೆ, ಸಿರುಗುಪ್ಪ, ಏ. 21
ಪಟ್ಟಣದಲ್ಲಿ ಈಚೆಗೆ ಸುರಿದ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ಬತ್ತದ ಗದ್ದೆಗಳು ಸಂಪೂರ್ಣ ನೆಲಕಚ್ಚಿ ನಷ್ಟವುಂಟಾದ ರೈತರ ಬತ್ತದ ಜಮೀನಿಗೆ ತಹಸೀಲ್ದಾರ್ ವೆಂಕನಗೌಡ ಪಾಟೀಲ್ ಹಾಗೂ ಎಡಿಎ ತಂಡ ತಾಲೂಕಿನ ತೆಕ್ಕಲಕೋಟೆಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿತು.
ಬಳಿಕ ತಹಸೀಲ್ದಾರ್ ವೆಂಕನಗೌಡ ಪಾಟೀಲ್ ಮಾತನಾಡಿ, ಬಿರುಗಾಳಿ, ಆಲಿಕಲ್ಲು ಮಳೆಗೆ ಬತ್ತದ ಬೆಳೆಗೆ ಅಪಾರ ನಷ್ಟವಾಗಿದ್ದು ಪರಿಶೀಲಿಸಲಾಗಿದೆ. ಯಾವ ರೈತರ ಎಷ್ಟು ಬೆಳೆ ನಷ್ಟವಾಗಿದೆ ಎಂಬುವುದನ್ನು ರೈತ ಸಂಪರ್ಕ ಹಾಗೂ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಎರಡು ತಂಡಗಳನ್ನು ರಚನೆ ಮಾಡಿ ನಷ್ಟಕ್ಕೆ ಒಳಗಾದ ಬೆಳೆ ಪರಿಶೀಲಿಸಿ ಮೇಲಧಿಕಾರಿಗಳಿಗೆ ವರದಿ ಒದಗಿಸಲಾಗುವುದು. ನಂತರ ಬಂದ ತೀರ್ಮಾನದಂತೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಎಕರೆಯೊಂದಕ್ಕೆ 45ರಿಂದ 50 ಚೀಲ ಬತ್ತ ಬೆಳೆಯುತ್ತೇವೆ. ಆದರೆ, ಬಿರುಗಾಳಿ, ಆಲಿಕಲ್ಲು ಮಳೆ ಬಂದು ಎಲ್ಲ ಬತ್ತವು ಮಣ್ಣು ಪಾಲಾಗಿವೆ.
ಕನಿಷ್ಠ 10ರಿಂದ 15 ಚೀಲಗಳು ಬಂದರೆ ನಾವು ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತೇವೆ. ಹೇಗಾದರೂ ಮಾಡಿ ಪರಿಹಾರ ಕೊಡಿಸ್ರಿ ಎಂದು ತಹಸೀಲ್ದಾರರಲ್ಲಿ ನಷ್ಟ ಅನುಭವಿಸಿದ ರೈತರಾದ ಕಂಠೆಪ್ಪ, ವಿರೇಶಪ್ಪ, ಫಕ್ರುದ್ದೀನ್ ಹಾಗೂ ಕ.ಪ್ರಾ.ರೈ.ಸಂ. ಅಧ್ಯಕ್ಷ ದುರಗಪ್ಪ ಇತರೆ ನೂರಾರು ರೈತರು ಅಧಿಕಾರಿಗಳಲ್ಲಿ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement