ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಬಳ್ಳಾರಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ವಿವಿಧ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮುಕ್ತ ಸಂಜೀವಿನಿ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಿದೆ ಎಂದು ವಿವಿಯ ಕುಲಸಚಿವರು ತಿಳಿಸಿದ್ದಾರೆ. ವಿದ್ಯಾರ್ಥಿಗಳು 2012-13ನೇ ಸಾಲಿನಲ್ಲಿ ಪ್ರಥಮ, ದ್ವಿತೀಯ, ತೃತೀಯ, ಬಿಎ, ಬಿಕಾಂ ಹಾಗೂ ಪ್ರಥಮ, ಅಂತಿಮ ವರ್ಷದ ಎಂಎ, ಎಂಕಾಂ ಸ್ಪೆಷಲ್, ಬಿಇಡಿ ಪದವಿಗೆ ಪ್ರವೇಶಾತಿ ಪಡೆದಿದ್ದು, 2013ರ ಏಪ್ರಿಲ್, ಮೇ, ಜೂನ್ ಮಾಹೆಯಲ್ಲಿ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಮೊದಲನೇ ಪ್ರಯತ್ನದಲ್ಲಿ ಕನಿಷ್ಠ 50 ಮತ್ತು ಅದಕ್ಕೂ ಹೆಚ್ಚು ಅಂಕ ಗಳಿಸಿ ಎಲ್ಲ ವಿಷಯಗಳಲ್ಲಿ ಒಂದೇ ಬಾರಿಗೆ ತೇರ್ಗಡೆ ಹೊಂದಿರಬೇಕು ಹಾಗೂ 2013-14ನೇ ಸಾಲಿನಲ್ಲಿ ದ್ವಿತೀಯ ಮತ್ತು ತೃತೀಯ ಬಿಎ, ಬಿಕಾಂ ಮತ್ತು ಅಂತಿಮ ವರ್ಷದ ಎಂಎ, ಎಂಕಾಂ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆರ್ಥಿಕವಾಗಿ ಹಿಂದುಳಿದಿರಬೇಕು. ಅಭ್ಯರ್ಥಿಯ ತಂದೆ, ಪೋಷಕ, ಗಂಡನ ವಾರ್ಷಿಕ ವರಮಾನ ರು. 1 ಲಕ್ಷ ಹಾಗೂ 2013ರ ಜುಲೈ 1ಕ್ಕೆ 30 ವರ್ಷ ಮೀರಿರಬಾರದು. ಈ ವಿದ್ಯಾರ್ಥಿ ವೇತನ ಪಡೆಯಲಿಚ್ಛಿಸುವವರು ಬೇರೆಲ್ಲೂ ವಿದ್ಯಾರ್ಥಿ ವೇತನ, ಸಮಾಜ ಕಲ್ಯಾಣ ಇಲಾಖೆಗೆ ಶುಲ್ಕ ಮರುಭರಿಕೆಗೆ ಅರ್ಜಿ ಸಲ್ಲಿಸಿರಬಾರದು. ತಮ್ಮ ಅರ್ಜಿಯೊಂದಿಗೆ ಎಸ್‌ಎಸ್‌ಎಲ್‌ಸಿ ದೃಢೀಕೃತ ಅಂಕಪಟ್ಟಿ ಪ್ರತಿ, ಹಿಂದಿನ ವರ್ಷದಲ್ಲಿ ತೇರ್ಗಡೆ ಹೊಂದಿದ ಅಂಕಪಟ್ಟಿ ಪ್ರತಿ, ತಹಸೀಲ್ದಾರ್ ಅವರಿಂದ ಪಡೆದ ಆದಾಯ, ಜಾತಿ ಪ್ರಮಾಣಪತ್ರ, ವಿಕಲಚೇತನರಾಗಿದ್ದಲ್ಲಿ ಸಕ್ಷಮ ವೈದ್ಯಕೀಯ ತಜ್ಞರಿಂದ ವಿಕಲಚೇತನ ಪ್ರಮಾಣಪತ್ರ, ವಿವಿ ನೀಡಿರುವ ಗುರುತಿನ ಚೀಟಿಯ ನೆರಳಚ್ಚು ಪ್ರತಿ ಹಾಗೂ ಇತ್ತೀಚಿನ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಲಗತ್ತಿಸಿರಬೇಕು. ಆಸಕ್ತರು ಭರ್ತಿ ಮಾಡಿದ ತಮ್ಮ ಅರ್ಜಿಗಳನ್ನು ಏ. 30ರೊಳಗಾಗಿ ಉಪ ಕುಲಸಚಿವರು (ಪ್ರವೇಶಾತಿ), ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು-6 ಅವರಿಗೆ ನೋಂದಾಯಿತ ಅಂಚೆ ಅಥವಾ ಕೊರಿಯರ್ ಮೂಲಕ, ಇಲ್ಲವೇ ಖುದ್ದಾಗಿ ಸಲ್ಲಿಸಬಹುದು. ಅರ್ಜಿ ನಮೂನೆ ಮತ್ತಿತರ ಮಾಹಿತಿಗಾಗಿ ಢಿಢಿಢಿ.್ಞಡ್ಟ್ಡಟಣಡ್ಟ್ಠಜ.ಜಜ್ಡ.್ಝಟಿ, ಸಮೀಪದ ಪ್ರಾದೇಶಿಕ ಕೇಂದ್ರ, ಅಧ್ಯಯನ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಚೇರಿ ವೇಳೆಯಲ್ಲಿ ಬದಲಾವಣೆ
ಬಳ್ಳಾರಿ: ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಕೆಲಸ ಕಾರ್ಯಗಳು ಏ. 21ರಿಂದ ಮೇ 10ರ ವರೆಗೆ ಹಾಗೂ ಮೇ 18ರಿಂದ 31ರವರೆಗೆ ಬೆಳಗ್ಗೆ 8ರಿಂದ ಮಧ್ಯಾಹ್ನ 1.30 ರ ವರೆಗೆ ನಡೆಯಲಿವೆ. ಈ ಅವಧಿಯಲ್ಲಿ ವೇದಿಕೆ ಕಾರ್ಯಕಲಾಪಗಳು ಬೆಳಗ್ಗೆ 11ರಿಂದ ಮಧ್ಯಾಹ್ನ 1.30 ರ ವರೆಗೆ ಜರುಗುತ್ತದೆ ಎಂದು ಅಧ್ಯಕ್ಷ ಪ್ರಕಾಶಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.