ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ಎ ಶ್ರೇಣಿ ಸಂಸ್ಥೆ
ಬಳ್ಳಾರಿ: ಹೊಸಪೇಟೆ ತಾಲೂಕು ಹಂಪಿ ಕ್ಷೇತ್ರದ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಯ ಎ ಶ್ರೇಣಿ ಸಂಸ್ಥೆಯಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಎಂ.ಎಚ್. ಪ್ರಕಾಶ್ ರಾವ್ ತಿಳಿಸಿದ್ದಾರೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಿಂದ ನೇಮಿಸಿದ ಕಾರ್ಯನಿರ್ವಾಹಕ ಅಧಿಕಾರಿಗಳ ವತಿಯಿಂದ ದೇವಸ್ಥಾನದ ಆಡಳಿತ ನಿರ್ವಹಣೆ ನಡೆಸಲಾಗುತ್ತಿದೆ. ಹಂಪಿ ಶ್ರೀ ವಿದ್ಯಾರಣ್ಯ ಸ್ವಾಮಿಗಳು ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಗುರುಪಾರಂಪರ್ಯ ಗುರುಗಳು ಮತ್ತು ವಂಶಪಾರಂಪರ್ಯ ಧರ್ಮಕರ್ತರಾಗಿರುತ್ತಾರೆ. ದೇವಸ್ಥಾನವು ಯಾವುದೇ ಖಾಸಗಿ ರಿಜಿಸ್ಟರ್ಡ್ ಸಂಸ್ಥೆಗಳು, ಸಮಿತಿಗಳು, ಟ್ರಸ್ಟಿಗಳು ದೇವಸ್ಥಾನದ ಹೆಸರಿನಲ್ಲಿ ಭಕ್ತಾದಿಗಳಿಂದ ಹಣ ವಸೂಲಿ ಮಾಡಲು ಅವಕಾಶ ನೀಡಿಲ್ಲ. ಇಂಥ ಟ್ರಸ್ಟ್ಗಳಿಗೆ ನೀಡಿದ ಹಣ ದೇವಾಲಯದ ನಿಧಿಗೆ ಸೇರುವುದಿಲ್ಲ. ದೇವಸ್ಥಾನದ ಆಡಳಿತ ವಿಚಾರ, ದೇವಸ್ಥಾನದ ಹಣಕಾಸಿನ ವಿಚಾರದಲ್ಲಿ ಅಧಿಕಾರ ಹೊಂದಿರುವುದಿಲ್ಲ, ಹಸ್ತಕ್ಷೇಪ ಮಾಡುವಂತಿಲ್ಲ, ಭಕ್ತಾದಿಗಳು ಖಾಸಗಿ ಸಂಸ್ಥೆಗಳಿಗೆ ವಂತಿಗೆ ನೀಡಬಾರದು. ಶ್ರೀ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿ ಹೆಸರಿನಲ್ಲಿ ಟ್ರಸ್ಟ್ ರಚಿಸಿಕೊಂಡು ಕಾನೂನು ಬಾಹಿರವಾಗಿ ನಿರ್ವಹಿಸಿದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
--