ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಡಾ. ರಾಜ್ ಸಾಧನೆಗೆ ರಂಗಭೂಮಿ ಮಾದರಿ

Rashmi Kasaragodu
Updated On : 25 Apr 2014, 12:01 pm

ಹೊಸಪೇಟೆ: ರಂಗಭೂಮಿಯ ಕಲೆಯಿಂದಾಗಿ ಡಾ. ರಾಜ್ಕುಮಾರ್ ಕೆಳ ಹಂತದಿಂದ ಉತ್ತುಂಗದ ಶಿಖರಕ್ಕೆ ಏರಿ ಚಿತ್ರರಂಗದಲ್ಲಿ ದೊಡ್ಡ ಸಾಧನೆ ಮಾಡುವುದಕ್ಕೆ ಸಾಧ್ಯವಾಯಿತು ಎಂದು ಮರಿಯಮ್ಮನಹಳ್ಳಿಯ ವೈದ್ಯ ಡಾ. ಅಂಬಣ್ಣ ಹೇಳಿದರು. ಮರಿಯಮ್ಮನಹಳ್ಳಿಯಲ್ಲಿ ಗುರುವಾರ ಡಾ. ರಾಜ್ಕುಮಾರ್ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಡಾ. ರಾಜ್ಕುಮಾರ್ 86ನೇ ಹುಟ್ಟುಹಬ್ಬ ಆಚರಣೆ ಉದ್ದೇಶಿಸಿ ಅವರು ಮಾತನಾಡಿದರು. ರಂಗ ಕಲೆ ಅತ್ಯಂತ ಪ್ರಭಾವಶಾಲಿ ಕಲೆಯಾಗಿದೆ. ಬಾಲಕೃಷ್ಣ, ನರಸಿಂಹರಾಜು, ವಜ್ರಮುನಿ, ಲೀಲಾವತಿ, ಮುಸರಿಕೃಷ್ಣಮೂರ್ತಿ ಹೀಗೆ ಅನೇಕ ಕಲಾವಿದರು ರಂಗಕಲೆಯಿಂದ ಮಾತ್ರ ಗುರುತಿಸಿಕೊಳ್ಳೋಕೆ ಸಾಧ್ಯವಾಯಿತು ಎಂದು ಹೇಳಿದರು. ಯುವಕರು ರಂಗಕಲೆ ಉಳಿಸುವ ಕಾರ್ಯದಲ್ಲಿ ತೊಡಗಬೇಕು. ರಂಗಕಲೆ ಮನುಷ್ಯನನ್ನು ಸದಾ ಕ್ರೀಯಾಶೀಲ ವ್ಯಕ್ತಿಗಳನ್ನಾಗಿ ರೂಪಿಸುತ್ತದೆಂದರು. ಹಿರಿಯ ರಂಗಕಲಾವಿದ ಎಚ್ ಇಸ್ಮಾಯಿಲ್ ಕಾರ್ಯಕ್ರಮ ಉದ್ಘಾಟಿಸಿದರು. ಸ್ಥಳೀಯ ಉದ್ಯಮಿಗಳಾದ ರಾಘವೇಂದ್ರ ಶೆಟ್ಟಿ, ಜಿ. ಸತ್ಯನಾರಾಯಣ ಶೆಟ್ಟಿ, ಭದ್ರಿನಾಥ, ಕೊಟ್ಗಿ ಮಂಜುನಾಥ, ನಿವೃತ್ತ ಶಿಕ್ಷಕ ಕಳಕಪ್ಪ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement