ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪದವೀಧರರಿಗೆ ದುಡಿವ ಮನೋಭಾವವಿರಲಿ

Rashmi Kasaragodu
Updated On : 25 Apr 2014, 12:02 pm

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಏ. 24
ವಿದ್ಯಾರ್ಥಿಗಳು ಪದವಿ ಮುಗಿದ ನಂತರ ಆರ್ಥಿಕ ಸ್ವಾವಲಂಬನೆಗೆ ಮನಸ್ಸು ಮಾಡಿ ದುಡಿಯುವ ಮನೋಭಾವನೆ ರೂಪಿಸಿಕೊಳ್ಳಬೇಕಾಗಿದೆ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಪಿ.ವಿ. ವಾರುಣಿ ಹೇಳಿದರು.
ನಗರದ ಥಿಯೋಸಾಫಿಕಲ್ ಮಹಿಳಾ ಕಾಲೇಜಿನಲ್ಲಿ ಗುರುವಾರ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪದವಿ ನಂತರ ಉನ್ನತ ವಿದ್ಯಾಭ್ಯಾಸಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಪೋಷಕರಿಗೆ ಮದುವೆ ಮಾಡಿ ಜವಾಬ್ದಾರಿ ಪೂರೈಸಬೇಕೆಂಬ ಆಸೆ ಇರುತ್ತೆ. ಇದರಲ್ಲಿ ನೀವು ಧೈರ್ಯ ವಹಿಸಿ ಮುಂದುವರಿಯಬೇಕು. ಒತ್ತಡಕ್ಕೆ ಸಿಲುಕದೇ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಸ್ವಾವಲಂಬನೆ ಕಡೆ ಹೆಚ್ಚು ಒತ್ತು ನೀಡಬೇಕು ಎಂದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಾಬುಲಾಲ್ ಜಿ. ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜು ಪ್ರಾಚಾರ್ಯೆ ಡಾ. ಬಿ. ಮಂಜುಳಾ ವಾರ್ಷಿಕ ವರದಿ ವಾಚಿಸಿದರು. ಮುಖ್ಯ ಅತಿಥಿಗಳಾಗಿ ಪಿಯು ಪ್ರಾಂಶುಪಾಲ ಜಗದೀಶ್, ಬಿಬಿಎಂ ಪ್ರಾಂಶುಪಾಲ ರಘೋತ್ತಮ, ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಅಶೋಕ್ ಜೀರೆ, ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಭೂಪಾಳ್ ಪ್ರಹ್ಲಾದ್, ಜಂಬಾನಹಳ್ಳಿ ವೆಂಕೋಬಣ್ಣ, ವಿ.ಆರ್. ಆಚಾರ್ಯ, ಸತ್ಯನಾರಾಯಣ ಶೆಟ್ಟಿ ಇತರರಿದ್ದರು.
ಸಲ್ಮಾ, ವೈಷ್ಣವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ. ಸಂಗೀತಾ ಗಾಂವಕರ್ ಸ್ವಾಗತಿಸಿದರು. ಉಪನ್ಯಾಸಕ ಕೆ. ಚನ್ನಪ್ಪ ವಂದಿಸಿದರು. ಇದೇ ಸಂದರ್ಭ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement