ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮೇ 28ಕ್ಕೆ ವಿಚಾರಣೆ

Rashmi Kasaragodu
Updated On : 25 Apr 2014, 12:02 pm

ಬಳ್ಳಾರಿ: 2009ರಲ್ಲಿ ಅರಣ್ಯ ಅಧಿಕಾರಿ ಯು.ವಿ. ಸಿಂಗ್ ಬೆದರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಎಂಎಫ್ ಅಧ್ಯಕ್ಷ ಸೋಮಶೇಖರ್ ರೆಡ್ಡಿ ಸೇರಿದಂತೆ 14 ಜನರಿಗೆ ಸಂಡೂರು ನ್ಯಾಯಾಲಯವು ವಾರಂಟ್ ಜಾರಿ ಮಾಡಿದೆ. 2009ರಲ್ಲಿ ಅರಣ್ಯ ಅಧಿಕಾರಿ ಎ.ವಿ. ಸಿಂಗ್ ಅವರು, ಸಂಡೂರಿನ ಗಣಿ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸೋಮಶೇಖರ್ ರೆಡ್ಡಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ದಿವಾಕರ್ ಸೇರಿದಂತೆ 14 ಜನರು ಯು.ವಿ. ಸಿಂಗ್ಗೆ ಬೆದರಿಕೆ ಹಾಕಿದ್ದಾರೆ ಎಂಬ ಹಿನ್ನೆಲೆಯಲ್ಲಿ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗೆ ಸಂಬಂಧಪಟ್ಟಂತೆ ಸಂಡೂರ್ ನ್ಯಾಯಾಲಯವು ಈ 14 ಜನರಿಗೆ ವಾರಂಟ್ ಜಾರಿ ಮಾಡಿದೆ. ಮೇ 28ರಂದು ಪ್ರಕರಣದ ವಿಚಾರಣೆ ನಡೆಯಲಿದೆ.
ಹಾಲುಮತ ದೇವರ ಉತ್ಸವ
ಕಂಪ್ಲಿ: ಇಲ್ಲಿಗೆ ಸಮೀಪದ ರಾಮಸಾಗರ ಗ್ರಾಮದ ಹಾಲುಮತ ಸಮಾಜ ಬಾಂಧವರು ತಮ್ಮ ಆರಾಧ್ಯದೈವ ಉಲ್ತಪ್ಪ ಮತ್ತು ಕಾರಮಿಂಚಪ್ಪ ದೇವರ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಗುರುವಾರ ನೆರವೇರಿಸಿದರು. ಇಲ್ಲಿನ ರಾಮಲಿಂಗೇಶ್ವರ ದೇವಸ್ಥಾನದಿಂದ ಆರಂಭವಾದ ಉಲ್ತಪ್ಪ ಮತ್ತು ಕಾರಮಿಂಚಪ್ಪ ದೇವರ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ದೇವಸ್ಥಾನ ತಲುಪಿತು. ಉತ್ಸವ ನಿಮಿತ್ತ ದೇವರುಗಳನ್ನು ಅಲಂಕರಿಸಲಾಗಿತ್ತು. ಅರ್ಚಕರಾದ ರೇವಣಸಿದ್ಧೇಶ್ವರ, ಉಲ್ತಪ್ಪ, ರಂಗಪ್ಪ ಪೂಜಾ ಕಾರ್ಯ ನಡೆಸಿದರು. ಮುಖಂಡರಾದ ಉಲ್ಚಿ ಗಾಳೆಪ್ಪ, ಬಿ. ನಾರಾಯಣಪ್ಪ, ರಮೇಶಗೌಡ, ಆರ್.ಟಿ. ಬಸವನಗೌಡ, ಎಚ್.ಸಿ. ಬಸವನಗೌಡ, ಶರಣಗೌಡ ಉತ್ಸವದ ನೇತೃತ್ವ ವಹಿಸಿದ್ದರು.
ನಾಳೆ ಲೋಕಾರ್ಪಣೆ, ಚಾಲನೆ
ಬಳ್ಳಾರಿ: ನಗರದ ಡಾ. ರಾಜ್ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿರುವ ವಿಚಾರ ಸಂಕಿರಣ ಸಭಾಂಗಣದಲ್ಲಿ ನೂತನ ಗಾಯತ್ರಿ ಪ್ರಕಾಶನದ ಉದ್ಘಾಟನೆ ಹಾಗೂ ಡಾ. ಟಿ.ಆರ್. ಚಂದ್ರಶೇಖರ್ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಮತ್ತು ಡಾ. ಎಂ. ಚಂದ್ರ ಪೂಜಾರಿ ಅವರ ಬದಲಾಗುತ್ತಿರುವ ಕರ್ನಾಟಕ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಏ. 26ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ. ಹಂಪಿ ಕನ್ನಡ ವಿ.ವಿ. ಕುಲಪತಿ ಪ್ರೊ. ಹಿ.ಚಿ. ಬೋರಲಿಂಗಯ್ಯ ಉದ್ಘಾಟನೆ, ಪುಸ್ತಕ ಬಿಡುಗಡೆ ಮಾಡುವರು. ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಸಮಾಜ ವಿಜ್ಞಾನ ನಿಕಾಯದ ಡೀನ ಪ್ರೊ. ಜೆ. ಸೋಮಶೇಖರ ಪುಸ್ತಕ ಪರಿಚಯಿಸುವರು. ಅರ್ಥಶಾಸ್ತ್ರಜ್ಞ ಪ್ರೊ. ಟಿ.ಆರ್. ಚಂದ್ರಶೇಖರ, ಕೊಪ್ಪಳದ ಕನ್ನಡ, ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಆಗಮಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement