ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನವಲಹಳ್ಳಿ: ಬಸವತತ್ವ ಪ್ರವಚನ ಆರಂಭ

Rashmi Kasaragodu
Updated On : 27 Apr 2014, 1:04 am

ತಾವರಗೇರಾ: ಸಮೀಪದ ನವಲಹಳ್ಳಿ ಗ್ರಾಮದಲ್ಲಿ ಬಸವತತ್ವ ಪ್ರವಚನಾ ಸೇವಾ ಸಮಿತಿ ಆಶ್ರಯದಲ್ಲಿ ಇತ್ತೀಚಿಗೆ ಪ್ರವಚನಾ ಕಾರ್ಯಕ್ರಮ ಆರಂಭಿಸಲಾಯಿತು. ಜಗಜ್ಯೋತಿ ಬಸವೇಶ್ವರರ 882ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಪ್ರವಚನ ಮೇ 2ರಂದು ಸಾಮೂಹಿಕ ವಿವಾಹದೊಂದಿಗೆ ಕೊನೆಗೊಳ್ಳಲಿದೆ.  ಈ ವೇಳೆ ಮಾತನಾಡಿದ ಸಮಿತಿಯ ಶರಣಬಸವ ಮುದಗಲ್, 14 ವರ್ಷದಿಂದ ಗ್ರಾಮದಲ್ಲಿ ಬಸವ ಜಯಂತಿ ನಿಮಿತ್ತ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿದಿನ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡುತ್ತೇವೆ ಎಂದರು. ನಂತರ ಕೇಂದ್ರ ಪ್ರವಚನಕಾರ ಶರಣಪ್ಪ ಹಸಬಿ ಮಾತನಾಡಿದರು. ನಿವೃತ್ತ ಗ್ರಾಮಲೆಕ್ಕಾಧಿಕಾರಿ ಡಿ.ಸಿ. ಮಾದಿನೂರ ಕಾರ್ಯಕ್ರಮ ಉದ್ಘಾಟಿಸಿದರು. ವೀರೇಶ ಕಡಿ, ದೊಡ್ಡಪ್ಪ ಗೆದಗೇರಿ, ಶರಣಗೌಡ ಪಾಟೀಲ್, ಯಲ್ಲಪ್ಪ ತುರ್ವಿಹಾಳ, ಸಂಗಪ್ಪ ಕಡೆಕೊಪ್ಪ, ಮಹಾಂತೇಶ ಅಂಗಡಿ, ಹಿರೇ ಮುದಕಪ್ಪ ಬಂಡೇರ ಇದ್ದರು.



ಎ. ಕೃಷ್ಣಪ್ಪಗೆ ಶ್ರದ್ಧಾಂಜಲಿ


ಬಳ್ಳಾರಿ:  ಜೆಡಿಎಸ್ ರಾಜ್ಯಾಧ್ಯಕ್ಷ, ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎ. ಕೃಷ್ಣಪ್ಪ ನಿಧನಕ್ಕೆ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಗುರುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೃಷ್ಣಪ್ಪ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ, ಜಿಲ್ಲಾಧ್ಯಕ್ಷ ಕುಡತಿನಿ ಶ್ರೀನಿವಾಸ್ ಮಾತನಾಡಿ, ಕೃಷ್ಣಪ್ಪ ಅಗಲಿಕೆಯಿಂದಾಗಿ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಂಡ್ರಿಗಿ ನಾಗರಾಜ್, ಮುಖಂಡ ಮೀನಳ್ಳಿ ತಾಯಣ್ಣ, ಎಚ್. ವೆಂಕಟೇಶ್, ಜಿ. ಗೋವರ್ಧನ, ಎಚ್. ಶಿವಣ್ಣ, ಸಣ್ಣ ನಾಗರಾಜ್, ಫೋಟೋ ರಾಜ, ನಿಯಾಜಿ ಅಹ್ಮದ್, ಮಿಂಚು ಶ್ರೀನಿವಾಸ್, ಸೂರ್ಯನಾರಾಯಣ, ಕುಬೇರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿಜಯಾ ಕುಮಾರಿ, ಮಹಿಳಾ ಘಟಕದ ಯಶೋದಮ್ಮ, ಗೌಸಿಯಾ, ರಾಮೇಶ್ವರಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement