ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ: ಸ್ವಾಮೀಜಿ
ಯಲಬುರ್ಗಾ: ಕಲೆ, ಸಂಗೀತ, ಸಾಹಿತ್ಯವನ್ನು ಬೆಳೆಸುವ ಜತೆಗೆ ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಮಠಗಳಲ್ಲಿ ಇದೂ ಒಂದು ಎಂದು ಮಾನಿಹಳ್ಳಿ ಪುರವರ್ಗ ಮಠದ ಮಳೆಯೋಗಿಶ್ವರ ಶ್ರೀ ಹೇಳಿದರು. ಅವರು ಇಲ್ಲಿನ ಸಂಸ್ಥಾನ ಹಿರೇಮಠದಲ್ಲಿ ಗುರುವಾರ ನಡೆದ ಸಿದ್ದರಾಮೇಶ್ವರ(ವಿದ್ಯಾಸಾಗರ)75ನೇ ಪುಣ್ಯ ಸ್ಮರಣೋತ್ಸವ ಹಾಗೂ 31ನೇ ವಾರ್ಷಿಕ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ಥಳೀಯ ಶ್ರೀ ಮಠದ ಪೀಠಾಧಿಪತಿ ಸಿದ್ದರಾಮೇಶ್ವರ ಶ್ರೀ ಮಾತನಾಡಿದರು. ಸಾಹಿತಿ ಸಿದ್ದರಾಮಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಆಕಾಶವಾಣಿ ಕಲಾವಿದರಾದ ಮೌನೇಶಕುಮಾರ, ರಾವಣಿ, ಪಂಚಾಕ್ಷರಿ, ಗೋವಿಂದರಾಜ, ಮಹಾಂತೇಶ ಹಿರೇಗೌಡ್ರ ಕಾರ್ಯಕ್ರಮ ನಡೆಸಿಕೊಟ್ಟರು.