ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರಾಮದೇವ್ ಕೋಮುವಾದಿ ಸಿದ್ಧಾಂತ ಪ್ರತಿಪಾದಕ

Rashmi Kasaragodu
Updated On : 27 Apr 2014, 1:03 am

ಹೊಸಪೇಟೆ:  ಯೋಗಗುರು ವೇಷದಲ್ಲಿರುವ ಹಾಗೂ ಪತಂಜಲಿ ಹೆಸರಿನಲ್ಲಿ ಕಳ್ಳದಂಧೆ ನಡೆಸುತ್ತಿರುವ ಬಾಬಾ ರಾಮದೇವ್, ಜನಸಮುದಾಯಗಳನ್ನು ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ವಿಭಜಿಸುವ ಕೋಮುವಾದಿ ಸಿದ್ಧಾಂತದ ಪ್ರತಿಪಾದಕರಾಗಿದ್ದಾರೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಬಳ್ಳಾರಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಹರಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಪ್ರತಿಕ್ರಿಯಿಸಿದ್ದಾರೆ. ರಾಮದೇವ್ ದೇಶಕ್ಕೆ ಮಾರಕವಾಗಿರುವ ಕೋಮುವಾದಿ ಸಿದ್ಧಾಂತದ ಪೋಷಣೆ ಹಿತದೃಷ್ಟಿಯಿಂದಲೇ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ದಲಿತ ಸಮುದಾಯದ ಬಗ್ಗೆ ವಿಕೃತ ಹೇಳಿಕೆ ಪ್ರಕಟಿಸಿದ್ದಾರೆ. ಕಾಂಗ್ರೆಸ್ದೊಂದಿಗಿರುವ ಅಹಿಂದ ಸಮುದಾಯಗಳ ವಿಶ್ವಾಸ ಸಹಿಸಿಕೊಳ್ಳಲಾಗದೇ ಬಾಬಾ ರಾಮದೇವ್  ಹನಿಮೂನ್ ಪದ ಪ್ರಯೋಗಿಸಿ ತಮ್ಮ ಮನಸ್ಸಿನ ವಿಕೃತಿ ಹೊರ ಹಾಕಿದ್ದಾರೆ ಎಂದು ಕಿಡಿ ಕಾರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement