ಮ್ಯಾಕಳಿ ಹುಲಿಗೆಮ್ಮ ನಿಧನ
ಕುರುಗೋಡು: ಸಮೀಪದ ವದ್ದಟ್ಟಿ ಗ್ರಾಮದ ಮ್ಯಾಕಳಿ ಹುಲಿಗೆಮ್ಮ (80) ಶುಕ್ರವಾರ ರಾತ್ರಿ ನಿಧನರಾದರು.
ಮೃತರಿಗೆ ಪತಿ, ಇಬ್ಬರು ಪುತ್ರ ಮತ್ತು ನಾಲ್ವರು ಪುತ್ರಿ ಇದ್ದಾರೆ. ಶನಿವಾರ ವದ್ದಟ್ಟಿ ಗ್ರಾಮದ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಾಜಿ ಸಚಿವ ಬಿ. ಶ್ರೀರಾಮುಲು, ಕೆಎಂಎಫ್ ಮಾಜಿ ಅಧ್ಯಕ್ಷ ಎ. ತಿಮ್ಮಾರೆಡ್ಡಿ, ಜಿಪಂ ಸದಸ್ಯೆ ಮಮತಾ ಮಹೇಶ ರೆಡ್ಡಿ, ಮಾಜಿ ಸದಸ್ಯ ಕಗ್ಗಲ್ ವೀರೇಶಪ್ಪ, ಮುಖಂಡ ವಿ.ಎಸ್. ಗಿರಿಮಲ್ಲಪ್ಪ, ಡಾ. ಯು.ಬಿ. ಶ್ರೀನಿವಾಸ್, ಎನ್. ಶ್ರೀಕಾಂತ ನಾಯಕ್, ವಿ.ಎಸ್. ಶಿವಶಂಕರ್ ಇತರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.