ಸಾವಿನಲ್ಲೂ ಮಾನವೀಯತೆ ಮೆರೆದ ವೆಂಕಟೇಶ್ವರರಾವ್
ಸಿರುಗುಪ್ಪ: ಸಿರುಗುಪ್ಪ ಪಟ್ಟಣಕ್ಕೆ ಸೇರಿದ ಆಂಧ್ರ ಮೂಲದವರಾದ ಮನ್ನೆ ವೆಂಕಟೇಶ್ವರ ರಾವ್(85) ಈಚೆಗೆ ನಿಧನರಾಗಿದ್ದು, ತಮ್ಮ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಇಬ್ಬರ ಅಂಧರ ಬಾಳಿನಲ್ಲಿ ಬೆಳಕು ಮೂಡಿಸಿ ಮಾನವೀಯತೆ ಮೆರೆದಿದ್ದಾರೆ.
ಮೃತರ ಸಹೋದರ ಎಂ. ಕೋಟೇಶ್ವರ ರಾವ್ ಶೇಷಾದ್ರಿ ಕ್ಯಾಂಪ್ನ ನಿವಾಸಿಗಳಾಗಿದ್ದು, ಜನರಲ್ಲಿ ನೇತ್ರದಾನ ಹಾಗೂ ದೇಹದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸ್ವತಃ ಸಹೋದರ ಮನ್ನೆ ವೆಂಕಟೇಶ್ವರಾವ್ ನಿಧನ ನಂತರ ವಿಮ್ಸ್ನ ನೇತ್ರ ಬಂಡಾರಕ್ಕೆ ಕಣ್ಣುಗಳನ್ನು ದಾನ ಮಾಡುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ. ನೇತ್ರಗಳನ್ನು ದಾನ ಮಾಡಲು ಇಚ್ಛಿಸುವವರು ಎಂ. ಕೋಟೇಶ್ವರರಾವ್ ಮೊ: 9902123942ಗೆ ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.