ಶ್ರೀರಾಮುಲು ಗೆಲವಿಗೆ 108 ತೆಂಗಿನಕಾಯಿ ಸಮರ್ಪಣೆ
ಕಂಪ್ಲಿ: ಬಳ್ಳಾರಿ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಭಾರಿ ಬಹುಮತದಿಂದ ಗೆಲವು ಸಾಧಿಸಲೆಂದು ಸಂಕಲ್ಪಿಸಿ ಇಲ್ಲಿನ 12ನೇ ವಾರ್ಡ್‌ನ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪುರಸಭೆ ಸದಸ್ಯ ಎನ್. ರಾಮಾಂಜನೇಯಲು ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ಬೆಳಗ್ಗೆ 108 ತೆಂಗಿನಕಾಯಿ ಒಡೆದು ಭಕ್ತಿ ಸಮರ್ಪಿಸಿದರು.
ಪುರಸಭೆ ಸದಸ್ಯ ಎನ್. ರಾಮಾಂಜನೇಯಲು, ಪುರಸಭೆ ಸದಸ್ಯ ವಾಲ್ಮೀಕಿ ರಘು ನಾಯಕ, ಯು. ರಾಮದಾಸ, ಪುರಸಭೆ ಮಾಜಿ ಅಧ್ಯಕ್ಷ ಬಿ. ಸಿದ್ದಪ್ಪ, ಬಿಜೆಪಿ ಮುಖಂಡ ಡಾ. ವೆಂಕಟೇಶ, ಸಿ. ಭರಮಕ್ಕನವರ್, ಬಾವಿಕಟ್ಟೆ ವೆಂಕಟೇಶಪ್ಪ, ಕೆ. ಹೊನ್ನೂರಪ್ಪ, ಎನ್. ಪಂಪಾಪತಿ, ಕೆ. ಹುಲುಗಪ್ಪ, ಬಿ. ಲಿಂಗಪ್ಪ, ಶಿವಕುಮಾರ, ಕೆ. ಚನ್ನಬಸಯ್ಯಸ್ವಾಮಿ, ಕೆ. ಗಂಗಾಧರ, ರುದ್ರೇಶ, ಕೆ. ವಿರುಪಣ್ಣ, ರಮೇಶ, ಅರ್ಚಕ ಹನುಮಂತಾಚಾರ್, ಯಲ್ಲಪ್ಪ ಇದ್ದರು.