ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಿಟಿಪಿಎಸ್‌ಗೆ ನೋಟಿಸ್ ನೀಡಿದ ಕಾರ್ಖಾನೆ ಉಪನಿರ್ದೇಶಕರು

Vishwanath S
Updated On : 8 Feb 2014, 12:43 pm

ಬಳ್ಳಾರಿ: ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ(ಬಿಟಿಪಿಎಸ್)ದಲ್ಲಿ ಕಲ್ಲಿದ್ದಲು ನಿರ್ವಹಣೆಯ ಘಟಕದಲ್ಲಿನ ಗುತ್ತಿಗೆ ಕಾರ್ಮಿಕರಿಗೆ ಸೇಫ್ಟಿ ಮೇಜರ್ ಅನುಸರಿಸುತ್ತಿಲ್ಲ ಎಂದು ಕಾರ್ಖಾನೆಗಳ ಉಪನಿರ್ದೇಶಕರು ಬಿಟಿಪಿಎಫ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ರತ್ನಮ್ಮ ಅವರಿಗೆ ಗುರುವಾರ ನೋಟಿಸ್ ಜಾರಿ ಮಾಡಿ 7 ದಿನಗಳ ಒಳಗಾಗಿ ಗುತ್ತಿಗೆ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಡಬೇಕೆಂದು ಸೂಚಿಸಿದ್ದಾರೆ.
ಕನ್ನಡಪ್ರಭ ಪತ್ರಿಕೆಯು ಫೆ. 5ರಂದು ನಾಲ್ಕನೇ ಪುಟದಲ್ಲಿ 'ಸಚಿವರ ತವರಲ್ಲಿ ಕಾರ್ಮಿಕರಿಗಿಲ್ಲ ರಕ್ಷಣೆ' ಎಂಬ ಶೀರ್ಷಿಕೆಯ ಅಡಿಯಲ್ಲಿ ಬಿಟಿಪಿಎಸ್‌ನಲ್ಲಿ ಕಲ್ಲಿದ್ದಲು ನಿರ್ವಹಣೆ ವಿಭಾಗದಲ್ಲಿ ಗುತ್ತಿಗೆ ಆಧಾರಿತವಾಗಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ದುಸ್ಥಿತಿ ಹಾಗೂ ಧೂಳಿನಲ್ಲಿ ಕೆಲಸ ನಿರ್ವಹಿಸುತ್ತಿರುವುದು, ಅವರ ಆರೋಗ್ಯದ ಮೇಲೆ ಪರಿಣಾಮ ಬೀಳುವ ಕುರಿತಾಗಿ ವಿಸ್ಕೃತ  ವರದಿ ಪ್ರಕಟ ಮಾಡಿತ್ತು. ವರದಿಗೆ ಸ್ಪಂದಿಸಿದ ಕಾರ್ಖಾನೆಗಳ ಉಪನಿರ್ದೇಶಕ ಶ್ರೀನಿವಾಸ್ ಅವರು ಫೆ.5ರಂದು ಸಂಜೆ ಬಿಟಿಪಿಎಸ್‌ನ ಕಲ್ಲಿದ್ದಲು ನಿರ್ವಹಣೆಯ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿನ ಗುತ್ತಿಗೆ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ್ದು, ಕಲ್ಲಿದ್ದಲು ನಿರ್ವಹಣೆಯ ಘಟಕದಲ್ಲಿ ಇಬ್ಬರು ಗುತ್ತಿಗೆದಾರರ ಅಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳಾದ ಬೂಟ್, ಮಾಸ್ಕ್ ಸೇರಿದಂತೆ ಸೇಪ್ಟಿ ಮೇಜರ್ ಅನುಸರಿಸುತ್ತಿಲ್ಲ ಎಂಬುದನ್ನು ತಿಳಿದು ಬಂದಿದ್ದು, ಗುರುವಾರ ಬಿಟಿಪಿಎಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿಗೆ ನೋಟಿಸ್ ಜಾರಿ ಮಾಡಿ, ಅಲ್ಲಿನ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ನೀಡುವಂತೆ ಸೂಚಿಸಿದೆ. ಕಾರ್ಖಾನೆಗಳ ಉಪನಿರ್ದೇಶಕ ಶ್ರೀನಿವಾಸ್ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಬಿಟಿಪಿಎಸ್‌ನ ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ಅಗತ್ಯ ಸೇಫ್ಟಿ ಮೇಜರ್ ಅನುಸರಿಸಿಲ್ಲ ಎಂದು ಬಿಟಿಪಿಎಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, 7 ದಿನಗಳ ಒಳಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ನೋಟಿಸ್‌ಗೆ ಸ್ಪಂದಿಸದಿದ್ದರೆ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement