ಮಹಿಳೆಯರ ಸಂಘಟಿತರಾಗಬೇಕು: ಸುನಂದಾ
ಹೊಸಪೇಟೆ: ಮಹಿಳೆಯರ ಮೇಲೆ ಅನೇಕ ದೌರ್ಜನ್ಯಗಳು, ದಬ್ಬಾಳಿಕೆಗಳು ನಿತ್ಯವೂ ನಡೆಯುತ್ತಿವೆ. ಮಹಿಳೆಯರು ಸಂಘಟನೆಯಾಗಿ ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯ ದೌರ್ಜನ್ಯ ತಡೆಗಟ್ಟಲು ಮಹಿಳೆಯರು ಮುಂದಾಗಬೇಕು ಎಂದು ನ್ಯಾಯವಾದಿ ಸುನಂದ ಹೇಳಿದರು.
ತಾಲೂಕಿನ ಚಿಲಕನಹಟ್ಟಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಾಹಿನಿ ಅಭಿವೃದ್ದಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಕೌಟುಂಬಿಕ ಮಹಿಳಾ ದೌರ್ಜನ್ಯ ಕುರಿತು ಒಂದು ದಿನದ ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಅನೇಕ ಕಿರುಕುಳ, ಹಿಂಸೆ ನೀಡುತ್ತಿರುವುದನ್ನು ನಿಲ್ಲಿಸುವ ಮೂಲಕ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡಬೇಕು. ವರದಕ್ಷಿಣೆ ಕಿರುಕುಳವನ್ನು ಬೇರು ಸಮೇತ ಕಿತ್ತೊಗೆಯಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿ ಲಕ್ಷ್ಮೀ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಗ್ರಾಪಂ ಸದಸ್ಯರಾದ ಪಾರ್ವತಮ್ಮ, ನೂರ್ ಜಹಾನ್, ಗ್ರಾಪಂ ಮಾಜಿ ಸದಸ್ಯೆ ಗೌರಮ್ಮ, ವಾಹಿನಿ ಅಭಿವೃದ್ದಿ ಸಂಸ್ಥೆಯ ಮಹಾಲಕ್ಷ್ಮೀ ಸೇರಿದಂತೆ ಇತರರು ಭಾಗವಹಿಸಿದ್ದರು. ಸರಸ್ವತಿ ಪ್ರಾರ್ಥಿಸಿದರು. ಕಾಮಾಕ್ಷಿ ಸ್ವಾಗತಿಸಿ, ವಂದಿಸಿದರು.