ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವಿದ್ಯುತ್ ಸುರಕ್ಷತಾ ಜಾಗೃತಿ ಮಾಸಾಚರಣೆ

Mainashree
Updated On : 10 Feb 2014, 1:52 am

ಕೊಪ್ಪಳ: ಜೆಸ್ಕಾಂ ವಿಭಾಗದ ವತಿಯಿಂದ ಈಚೆಗೆ ನಗರದ ವಿವಿಧ ರಸ್ತೆಗಳ ಮೂಲಕ ವಿದ್ಯುತ್ ಸುರಕ್ಷತಾ ಜಾಗೃತಿ ಮಾಸಾಚರಣೆ ಆಚರಿಸಲಾಯಿತು. ಕೊಪ್ಪಳ ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎಸ್. ಪತ್ತಾರ ಹಾಗೂ ಕೆ.ವಿ.ಸಿ ರಾಮಾಂಜನೆಯಲು ನೇತೃತ್ವದಲ್ಲಿ ಕೊಪ್ಪಳ ಜವಾಹರ ರಸ್ತೆ, ಗಡಿಯಾರ ಕಂಬ, ಅಶೋಕ ವೃತ್ತದಿಂದ ಕೇಂದ್ರಿಯ ಬಸ್ ನಿಲ್ದಾಣದ ವರೆಗೂ ಜಾಗೃತಿ ಜಾಥಾ ನಡೆಯಿತು. ಗ್ರಾಹಕರಲ್ಲಿ ವಿದ್ಯುತ್ ಅವಘಡದಿಂದ ಸಂಭವಿಸುವ ಅಪಘಾತಗಳನ್ನು ತಡೆಗಟ್ಟುವ ಕುರಿತು ಜನತೆಗೆ ಮನವರಿಕೆ ಮಾಡಲಾಯಿತು. ವಿದ್ಯುತ್ ಸುರಕ್ಷತೆ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಲಾಯಿತು. ವಿದ್ಯುತ್ ಅಪಘಾತ ಸಂಭವಿಸಿದ ವೇಳೆ ಸಮೀಪದ ಜೆಸ್ಕಾಂ ಕಚೇರಿ ಇಲ್ಲವೇ ಗ್ರಾಹಕ ಸೇವಾ ಕೇಂದ್ರ (8004258585)ಕ್ಕೆ ಮಾಹಿತಿ ನೀಡಲು ತಿಳಿಸಲಾಯಿತು. ಜಾಥಾದಲ್ಲಿ ವಿಭಾಗ ಹಾಗೂ ಉಪ ವಿಭಾಗದ ಅಧಿಕಾರಿ ಮಳ್ಳಿ ಶಾಮ್‌ಸುಂದರ, ಡಿ. ಮಹೇಶ, ಬಿ.ಆರ್. ದೇಸಾಯಿ, ವೀರೇಶ ಯು, ಖಾಜಾ ಮೈನುದ್ದೀನ್, ಡಿ. ರಾಘವೇಂದ್ರ, ಹನುಮಂತಪ್ಪ, ಜೆಸ್ಕಾಂ ನೌಕರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement