ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಲ್ಲು ಎತ್ತಿಹಾಕಿ ಪತ್ನಿ ಕೊಲೆ

Rashmi Kasaragodu
Updated On : 11 Feb 2014, 11:36 am

ಕೂಡ್ಲಿಗಿ: ನಿದ್ದೆಯಲ್ಲಿದ್ದ ಪತ್ನಿಯ ತಲೆಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಘಟನೆ ತಾಲೂಕಿನ ಗುಡೇಕೋಟೆ ಸಮೀಪದ ಸಂಕ್ಲಾಪುರ ಕೊರಚರಹಟ್ಟಿಯಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ. ಕೊಲೆಗೀಡಾದವಳನ್ನು ಆಂಧ್ರಪ್ರದೇಶದ ಕಮಲಾಪುರಂ ಗ್ರಾಮದ ನಾಗಮ್ಮ (52) ಎಂದು ಗುರುತಿಸಲಾಗಿದೆ. ಕೊಲೆ ಮಾಡಿರುವ ಆರೋಪಿ ಗಿತ್ತಿ ರಾಮಪ್ಪ ಪರಾರಿಯಾಗಿದ್ದಾನೆ. ಈಕೆ ಸಂಕ್ಲಾಪುರ ಕೊರಚರಹಟ್ಟಿಯ ತನ್ನ ಅಕ್ಕ, ತಂಗಿಯರ ಮನೆಗೆ ಹದಿನೈದು ದಿನಗಳ ಹಿಂದೆ ಜಾತ್ರೆಗಾಗಿ ಆಗಮಿಸಿದ್ದಳು. ಜಾತ್ರೆ ಮುಗಿದ ಅನಂತರ ತನ್ನ ಸಹೋದರಿಯರ ಹೊಲದಲ್ಲಿ ಕೆಲಸ ಇರುವುದರಿಂದ ಉಳಿದುಕೊಂಡಿದ್ದಳು. ಭಾನುವಾರ ರಾತ್ರಿ ಆಕೆಯ ಪತಿ ಆಂಧ್ರಪ್ರದೇಶದ ಗಿತ್ತ ರಾಮಪ್ಪ ಗ್ರಾಮಕ್ಕೆ ಬಂದು ಪತ್ನಿಯನ್ನು ಊರಿಗೆ ಕರೆದಿದ್ದಾನೆ. ಇನ್ನೆರಡು ದಿನಗಳಲ್ಲಿ ಹೊಲದ ಕೆಲಸ ಮುಗಿಸಿ ಹೋದರಾಯಿತು ಎಂದು ಹೇಳಿ ರಾತ್ರಿ ಮಲಗಿಕೊಂಡಿದ್ದಾರೆ. ಕುಪಿತಗೊಂಡ ರಾಮಪ್ಪ ಕುಡಿದ ಅಮಲಿನಲ್ಲಿ ಹೆಂಡತಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಘಟನೆ ಸಂಕ್ಲಾಪುರ-ಕೊರಚರಹಟ್ಟಿ ಮಧ್ಯೆ ಇರುವ ಜಮೀನಿನಲ್ಲಿ ನಡೆದಿದೆ. ಸ್ಥಳಕ್ಕೆ ಕೂಡ್ಲಿಗಿ ಸಿಪಿಐ ಒ.ಬಿ. ಕಲ್ಲೇಶಪ್ಪ, ಪಿಎಸ್ಐ ಕೃಷ್ಣನಾಯ್ಕ, ಗುಡೇಕೋಟೆ ಎಎಸ್ಐ ನಾಗೇಂದ್ರಪ್ಪ, ಎನ್.ಎಂ. ಸ್ವಾಮಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗುಡೇಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂಡ್ಲಿಗಿ: ವೈದ್ಯೆ ಮನೆಗೆ ನುಗ್ಗಿಪೊಲೀಸ್ ಅತಿಥಿಯಾದ ಎಸ್ಡಿಸಿ
ಕೂಡ್ಲಿಗಿ: ಪಟ್ಟಣದಲ್ಲಿ ವಾಸವಿರುವ ವೈದ್ಯೆಯ ಮೊಬೈಲ್ಗೆ ಲವ್ಗೆ ಸಂಬಂಧಿಸಿದ ಮೆಸೇಜ್ ಕಳುಹಿಸುವ ಮೂಲಕ ಮಾನಸಿಕ ಕಿರುಕುಳ ನೀಡುವ ಜತೆಗೆ ಭಾನುವಾರ ರಾತ್ರಿ ಮೂರ್ನಾಲ್ಕು ಜನರೊಂದಿಗೆ ದ್ವಿತೀಯ ದರ್ಜೆ ಗುಮಾಸ್ತನೋರ್ವ ಏಕಾಏಕಿ ಮನೆಗೆ ನುಗ್ಗಿದ ಘಟನೆ ಜರುಗಿದೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಂಪುರ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಡಾ. ಪಂಕಜಾ (ಹೆಸರು ಬದಲಿಸಲಾಗಿದೆ) ಅವರ ಮನೆಗೆ ಅದೆ ಆಸ್ಪತ್ರೆಯಲ್ಲಿ ಎಸ್ಡಿಸಿ ಆಗಿ ಕರ್ತವ್ಯ ನಿರ್ವಹಿಸುವ ಪ್ರವೀಣ್ ಎಂಬಾತ ನುಗ್ಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಆ ವೈದ್ಯೆಗೆ ಪ್ರೀತಿಗೆ ಸಂಬಂಧಿಸಿದ ಮೆಸೇಜ್ಗಳನ್ನು ಕಳುಹಿಸುತ್ತಿದ್ದನು. ಆದರೆ ಏಕಾಏಕಿ ಭಾನುವಾರ ರಾತ್ರಿ 9ರ ಸುಮಾರಿಗೆ 3-4 ಜನರೊಂದಿಗೆ ಆತ ಮನೆಗೆ ನುಗ್ಗಿ ದಾಂದಲೆ ನಡೆಸಿದ್ದಾನೆ. ಕೂಡಲೆ ವೈದ್ಯೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ಪ್ರವೀಣ್ನನ್ನು ಬಂಧಿಸಿದ್ದಾರೆ. ಉಳಿದವರು ಪರಾರಿಯಾಗಿದ್ದು, ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ಕೃಷ್ಣ ನಾಯ್ಕ ತಿಳಿಸಿದ್ದಾರೆ.
ಪ್ರಮೋದ್ಕುಮಾರ್ಗೆ ದ್ವಿತೀಯ ಸ್ಥಾನ
ಕೊಟ್ಟೂರು: ರಾಜ್ಯ ವಿಜ್ಞಾನ ಪರಿಷತ್ ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆಸಿದ ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ವಿಷಯದ ಭಾಷಣ ಸ್ಪರ್ಧೆಯಲ್ಲಿ ಪಟ್ಟಣದ ಕೊಟ್ಟೂರೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿ ಎನ್.ಎಂ. ಪ್ರಮೋದ್ಕುಮಾರ್ ವಿವಿ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಕಾಲೇಜಿಗೆ ಹೆಮ್ಮೆ ತಂದಿದ್ದಾರೆ ಎಂದು ಪ್ರಾಚಾರ್ಯ ಕೆ.ವಿ. ಪುರ್ತಗೆರೆ, ವಿಜ್ಞಾನ ಸಂಘದ ಸಂಚಾಲಕ ಡಾ.ಎ. ರಾಮಚಂದ್ರ ತಿಳಿಸಿ ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement