ಕುಂವೀ ಹೇಳಿಕೆ ಖಂಡನೀಯ: ಡಾ. ಕೆ.ಎಸ್. ಶಿವಪ್ರಕಾಶ
ಕೊಟ್ಟೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ.ಯು.ಆರ್. ಅನಂತಮೂರ್ತಿ ಮತ್ತು ಗಿರೀಶ್ ಕಾರ್ನಾಡ್ ಅವರ ಬಗ್ಗೆ ಸಾಹಿತಿ ಕುಂ. ವೀರಭದ್ರಪ್ಪ ಅವರು ನಾನ್ಸೆನ್ಸ್ ಎಂದು ಹೇಳಿರುವುದು ನಿಜಕ್ಕೂ ಕನ್ನಡ ನಾಡಿನ ಜನತೆ ತಲೆ ತಗ್ಗಿಸುವಂತಾಗಿದೆ. ಯಾವುದೆ ಪ್ರಶಸ್ತಿಗಳು ನಾನ್ಸೆನ್ಸ್ಗಳಾಗಲು ಸಾಧ್ಯವೆ ಇಲ್ಲ. ಪ್ರಶಸ್ತಿಗಳನ್ನು ಪಡೆದ ಕೆಲ ಚಿಲ್ಲರೆ ಸಾಹಿತಿಗಳ ಕಚ್ಚಾಟ, ಹುಚ್ಚಾಟ, ಹೊಟ್ಟೆಪಾಡಿಗಾಗಿ ಪ್ರಶಸ್ತಿಗಳನ್ನು ಪಡೆದವರು ನಾನ್ಸೆನ್ಸ್ಗಳಾಗಿದ್ದಾರೆ ಎಂಬ ಕುಂವೀ ಅವರ ಹೇಳಿಕೆ ನಿಜಕ್ಕೂ ಅರ್ಥಹೀನ ವಾದವುಗಳಾಗಿವೆ ಎಂದು ಕಸಾಪ ಹೋಬಳಿ ಘಟಕದ ಮಾಜಿ ಅಧ್ಯಕ್ಷ, ಉಪನ್ಯಾಸಕ ಡಾ.ಕೆ.ಎಸ್. ಶಿವಪ್ರಕಾಶ್ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಹೊಟ್ಟೆಕಿಚ್ಚಿನ ಈ ಬಗೆಯ ಹೇಳಿಕೆಗಳನ್ನು ನೀಡುವ ಚಿಲ್ಲರೆ ಸಾಹಿತಿಗಳು ಸಾಹಿತ್ಯ ಲೋಕದಿಂದ ನಿವೃತ್ತಿ ಹೊಂದಿ ರಾಜಕೀಯ ಮಾಡಿದರೆ ಯಾವ ರಾಜಕಾರಣಿಗಳಿಗೂ ಖಂಡಿತಾ ಕಡಿಮೆ ಏನಲ್ಲಾ ಎಂಬಂಥ ವಾತಾವರಣ ಸಾಹಿತಿಗಳ ವಲಯದಲ್ಲಿ ಸೃಷ್ಟಿಯಾಗಿರುವುದು ನಿಜಕ್ಕೂ ಖೇದಕರ ವಿಷಯ ಎಂದಿದ್ದಾರೆ.