ಬಳ್ಳಾರಿ: ಕ್ರೀಡಾಪಟುಗಳಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 10
ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಬೆಂಗಳೂರಿನಲ್ಲಿ ಜನವರಿ ತಿಂಗಳಲ್ಲಿ ಏರ್ಪಡಿಸಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಯಗಳಿಸಿದ ಜಿಲ್ಲೆಯ ಕ್ರೀಡಾಪಟುಗಳನ್ನು ಈಚೆಗೆ ಸನ್ಮಾನಿಸಲಾಯಿತು.
ಸಂಘದ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಈಜು ಸ್ಪರ್ಧೆಯಲ್ಲಿ ಪಶುಸಂಗೋಪನೆ ಇಲಾಖೆಯ ಲತಾ ಪಾಟೀಲ್ (ಪ್ರಥಮ), ವೈದ್ಯಕೀಯ ಶಿಕ್ಷಣ ಇಲಾಖೆಯ ಸುಶ್ರೂಶಕಿ ಶಾಂತಾಬಾಯಿ (ದ್ವಿತೀಯ), ಕುಸ್ತಿಯಲ್ಲಿ ಶಿಕ್ಷಣ ಇಲಾಖೆಯ ಫಕ್ಕೀರಪ್ಪ (ಪ್ರಥಮ), ನ್ಯಾಯಾಂಗ ಇಲಾಖೆಯ ಟಿ. ಸ್ವಾಮಿ (ದ್ವಿತೀಯ), ತಟ್ಟೆ ಎಸೆತದಲ್ಲಿ ಶಿಕ್ಷಣ ಇಲಾಖೆ ಹೊಸಪೇಟೆಯ ನಂದಾದೇವಿ ಎಚ್.ಎಂ. (ದ್ವಿತೀಯ), ಬ್ರಿಜ್ ತಂಡದಲ್ಲಿ ಸಂಡೂರಿನ ರಾಥೋಡ್ ತಂಡ (ಪ್ರಥಮ), ವೇಟ್ ಲಿಫ್ಟಿಂಗ್ನಲ್ಲಿ ಶಿಕ್ಷಣ ಇಲಾಖೆಯ ಹೊಸಪೇಟೆ ಮುನಿಯ ನಾಯಕ್ (ದ್ವಿತೀಯ), ಕೆ. ಮಾಲಿಕ್ (ತೃತೀಯ), ಕಂಪ್ಲಿ ಫಕ್ಕೀರಪ್ಪ (ತೃತೀಯ) ಅವರನ್ನು ಜಿಲ್ಲಾಧ್ಯಕ್ಷ ಎಂ.ಟಿ. ಮಲ್ಲೇಶ್ ಸನ್ಮಾನಿಸಿದರು.