ರಾಜ್ಯಮಟ್ಟದ ಕನ್ನಡ ಪರೀಕ್ಷೆ: ಮೋನಿಕಾ ಪ್ರಥಮ
ಬಳ್ಳಾರಿ: ರಾಜ್ಯಮಟ್ಟದ ಕನ್ನಡ ಪರೀಕ್ಷೆಯಲ್ಲಿ ಸ್ಥಳೀಯ ಹೀರದ ಸೂಗಮ್ಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಬಿ. ಮೋನಿಕಾ ಬಳ್ಳಾರಿ ತಾಲೂಕಿಗೆ ಪ್ರಥಮ ರ್ಯಾಂಕ್ ಪಡೆದಿದ್ದಾಳೆ. ಚಿತ್ರದುರ್ಗದ ನವೋದಯ ಪ್ರಕಾಶನವು ಈಚೆಗೆ ಆಯೋಜಿಸಿದ್ದ ಪರೀಕ್ಷೆಯಲ್ಲಿ ಜಿಲ್ಲೆಯಿಂದ ಭಾಗವಹಿಸಿದ್ದ 50 ವಿದ್ಯಾರ್ಥಿಗಳ ಪೈಕಿ ಮೋನಿಕಾ ತಾಲೂಕಿಗೆ ಪ್ರಥಮ ರ್ಯಾಂಕ್ ಗಳಿಸಿದ್ದಾಳೆ.