ಯುವತಿ, ಯುವಕ ಸಾವು
ಕೂಡ್ಲಿಗಿ: ತಾಲೂಕಿನ ಬಿಷ್ಣಹಳ್ಳಿ ಗ್ರಾಮದಲ್ಲಿ 3 ತಿಂಗಳ ಹಿಂದೆ ಮದುವೆ ನಿಶ್ಚಿತಾರ್ಥವಾಗಿದ್ದ ಯುವತಿ ಮತ್ತು ಯುವಕ ಪ್ರತ್ಯೇಕ ಘಟನೆಯಲ್ಲಿ ಮಂಗಳವಾರ ಸಾವಿಗೀಡಾಗಿದ್ದಾರೆ. ಗ್ರಾಮದ ಪವಿತ್ರಾ ಮತ್ತು ಪ್ರಶಾಂತ್ಗೆ ನಿಶ್ಚಿತಾರ್ಥವಾಗಿತ್ತು. ಮಂಗಳವಾರ ಬೆಳಗ್ಗೆ ಪವಿತ್ರಾ (19)ಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗಾಗಿ ಚಿತ್ರದುರ್ಗ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಸಾವಿಗೀಡಾಗಿದ್ದಾಳೆ. ಈ ಸುದ್ದಿ ತಿಳಿಯುತ್ತಿದ್ದಂತೆ ಪ್ರಶಾಂತ್ (22) ಮನನೊಂದು ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಹೊಸಹಳ್ಳಿ ಠಾಣೆಯಲ್ಲಿ ಪ್ರತ್ಯೇಕ 2 ಪ್ರಕರಣಗಳು ದಾಖಲಾಗಿವೆ.
ಆಟೋ ಪಲ್ಟಿ: 21 ಜನರಿಗೆ ಗಾಯ
ಕೂಡ್ಲಿಗಿ: ತಾಲೂಕಿನ ಅಮಲಾಪುರ ಸಮೀಪ ಬುಧವಾರ ಆಟೋ ಪಲ್ಟಿಯಾಗಿ ಸುಮಾರು 21 ಜನರಿಗೆ ಗಾಯಗಳಾದ ಘಟನೆ ನಡೆದಿದೆ. ಎಂ.ಬಿ. ಅಯ್ಯನಹಳ್ಳಿಯ ಸುಂಕದಕಲ್ಲು ದೊಡ್ಡಪ್ಪ, ಕ್ಯಾಸನಕೇರಿ ರಾಮಣ್ಣ, ಗೆಣತಿಕಟ್ಟೆ ಎಂ. ಪವಿತ್ರಾ, ಪರಿಮಳಾ, ಪ್ರವೀಣ್ಕುಮಾರ್, ರತ್ನಮ್ಮ, ಅಮಲಾಪುರ ಲಕ್ಷ್ಮೀ, ಇಂದು, ಕಿಶೋರ್, ಪ್ರದೀಪ್, ಲಕ್ಷ್ಮೀಬಾಯಿ, ಸರಸ್ವತಿ, ನಿರಂಜನ, ನಾಗಭೂಷಣ್, ಶರಣಪ್ಪ, ಗುಂಡಮ್ಮ, ಮಾರಕ್ಕ, ಕಾರ್ತಿಕ್, ಪವನ್ ಸೇರಿ ಅನೇಕರು ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.