ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹಡಗಲಿ ತಾಪಂ, ವಿವಿಧ ಗ್ರಾಪಂಗೆ ಚುನಾವಣೆ

Vishwanath S
Updated On : 14 Feb 2014, 1:32 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 13
ಜಿಲ್ಲೆಯ ಹಡಗಲಿ ತಾಲೂಕು ಪಂಚಾಯಿತಿ ಹಾಗೂ ವಿವಿಧ ತಾಲೂಕುಗಳ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸ್ಥಾನಗಳಿಗೆ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಬುಧವಾರ ಅಧಿಸೂಚನೆ ಹೊರಡಿಸಿದ್ದಾರೆ.
ವೇಳಾಪಟ್ಟಿಯನ್ವಯ ನಾಮಪತ್ರಗಳನ್ನು ಸಲ್ಲಿಸಲು ಫೆ. 19 ಕೊನೆಯ ದಿನ. ಫೆ. 20ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಫೆ. 22 ಕೊನೆ ದಿನವಾಗಿದೆ. ಮತದಾನದ ಅವಶ್ಯಕತೆ ಇದ್ದರೆ ಮಾ. 2ರಂದು ಮತದಾನ ನಡೆಸಲಾಗುವುದು. ಮಾ. 5ರೊಳಗೆ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಹಡಗಲಿ ತಾಲೂಕಿನ ಹೊಳಲು ಗ್ರಾಮದ ತಾಪಂ ಸದಸ್ಯ ಸ್ಥಾನ ಕವಿತಾ ಹೂಗಾರ ಅವರ ರಾಜಿನಾಮೆಯಿಂದ ತೆರವಾಗಿರುವುದರಿಂದ ಚುನಾವಣೆ ನಡೆಸಲಾಗುತ್ತಿದ್ದು, ಈ ಸ್ಥಾನವು ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯಿತಿ ಹಾಗೂ ಮೀಸಲಾತಿ ವಿವರ ಕೆಳಗಿನಂತಿದೆ.
ಬಳ್ಳಾರಿ ತಾಲೂಕು: ಮೋಕಾ ಗೋನಾಳ್ ಗ್ರಾಮ ಪಂಚಾಯಿತಿ (ಜಾಲಿಹಾಳ್ ಕ್ಷೇತ್ರ) ಸದಸ್ಯ ಸ್ಥಾನವು ಅನುಸೂಚಿತ ಪಂಗಡ (ಸಾ)ವರ್ಗಕ್ಕೆ ಹಾಗೂ ಶಂಕರಬಂಡೆ ಗ್ರಾಪಂ ಸದಸ್ಯ ಸ್ಥಾನವು ಹಿಂದುಳಿದ ವರ್ಗ ಅ (ಸಾ) ವರ್ಗಕ್ಕೆ ಮೀಸಲಿಡಲಾಗಿದೆ. ಜಾಲಿಹಾಳನಲ್ಲಿ ಹೊನ್ನೂರಪ್ಪ ಹಾಗೂ ಶಂಕರಬಂಡೆಯಲ್ಲಿ ಕೆ. ಸಣ್ಣಕೊಲ್ಲಯ್ಯ ಅವರ ಮರಣದಿಂದ ಗ್ರಾಪಂ ಸದಸ್ಯ ಸ್ಥಾನ ತೆರವಾಗಿದೆ. ಸಿರುಗುಪ್ಪ- ಬಲಕುಂದಿ ಹಿಂದುಳಿದ ವರ್ಗ ಅ(ಸಾ), ಶಾನವಾಸಪುರ- ಅನುಸೂಚಿತ ಪಂಗಡ (ಸಾ). ಬಲಕುಂದಿಯ ವೆಂಕಟೇಶ ಹಾಗೂ ಶಾನವಾಸಪುರದ ಟಿ. ನರಸಪ್ಪ ಮರಣದಿಂದ ಸದಸ್ಯ ಸ್ಥಾನ ಖಾಲಿಯಿದೆ.
ಹೊಸಪೇಟೆ: ಹೊಸೂರು- ಅ.ಪಂ (ಮ), ಜಿ. ನಾಗಲಾಪುರ- ಹಿಂದುಳಿದ ವರ್ಗ ಅ (ಸಾ), ಚಿಲಕನಹಟ್ಟಿ- ಅ.ಪಂ. (ಸಾ). ಹೊಸೂರಿನ ಎ. ನಾಗರತ್ನಮ್ಮ, ಜಿ. ನಾಗಲಾಪುರದ ಬಿ. ತುಮಂದೆಪ್ಪ ಹಾಗೂ ಚಿಲಕನಹಟ್ಟಿಯ ನಾಗರಾಜ್ ಅವರ ಮರಣದಿಂದ ಸದಸ್ಯ ಸ್ಥಾನ ತೆರವಾಗಿದೆ.
ಹಗರಿಬೊಮ್ಮನಹಳ್ಳಿ: ಸಾಮಾನ್ಯ, ಮಾಲವಿ (ನೆಲ್ಕುದ್ರಿ ಕ್ಷೇತ್ರ) - ಅ.ಜಾ (ಸಾ). ಹಗರಿಬೊಮ್ಮನಹಳ್ಳಿ ಗ್ರಾಪಂನ ಹಾಲ್ದಾಳ್ ವಿಜಯಕುಮಾರ್ ಅವರ ರಾಜಿನಾಮೆ ಹಾಗೂ ನೆಲ್ಕುದ್ರಿಯ ಕೆ. ತಿರುಕಪ್ಪ ಅವರ ಮರಣದಿಂದ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಹೂವಿನಹಡಗಲಿ: ಹಿರೇಹಡಗಲಿ- ಅ.ಪಂ. (ಸಾ), ನವಲಿ (ಕೊಟ್ನಿಕಲ್ಲು)- ಸಾ (ಮ). ಹಿರೇಹಡಗಲಿಯ ಟಿ. ದಂಡೆಪ್ಪ ಹಾಗೂ ನವಲಿ ಸದಸ್ಯರಾದ ಎಸ್.ಎಂ. ಶಾರದವ್ವ ಅವರ ಮರಣದಿಂದ ಖಾಲಿಯಾಗಿದೆ.
ಕೂಡ್ಲಿಗಿ: ಹುಡೇಂ- ಅ.ಪಂ. (ಸಾ), ಕಾಳಾಪುರ- ಅ.ಪಂ. (ಮ), ಹಿರೇಹೆಗ್ಡಾಳ್- ಅ.ಪಂ. (ಮಹಿಳೆ). ಓಬಯ್ಯ, ಕಾಳಾಪುರದ ಸಿದ್ದಮ್ಮ ಮರಣದಿಂದ ಹಾಗೂ ಹಿರೇಹೆಗ್ಡಾಳನ ಬಸಮ್ಮ ತಳವಾರ ರಾಜಿನಾಮೆಯಿಂದ ಸದಸ್ಯ ಸ್ಥಾನ ಖಾಲಿಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement