ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಇಂದಿನಿಂದ ಭಗವದ್ಗೀತೆ ಸಪ್ತಾಹ: ಶೀಲಾ ಬ್ರಹ್ಮಯ್ಯ

Mainashree
Updated On : 17 Feb 2014, 10:00 am

ಬಳ್ಳಾರಿ: ಭಗವದ್ಗೀತೆ ಸಪ್ತಾಹ ಮಹೋತ್ಸವ ಕಾರ್ಯಕ್ರಮ ಫೆ. 17ರಿಂದ ಫೆ. 23ರ ವರೆಗೆ ಪ್ರತಿದಿನ ಸಂಜೆ 6.30ರಿಂದ 8ರ ವರೆಗೆ ರಾಘವ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಬಳ್ಳಾರಿ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷೆ ಶೀಲಾ ಬ್ರಹ್ಮಯ್ಯ ತಿಳಿಸಿದ್ದಾರೆ.
ನಗರದ ಮಾತನಾಡಿದ ಅವರು, ಭಗವದ್ಗೀತೆ ಸಪ್ತಾಹದೊಂದಿಗೆ ಪ್ರೌಢಶಾಲೆ, ಪಿಯುಸಿ ಹಾಗೂ ಪದವಿ ಹಂತದ ಮಕ್ಕಳಿಗೆ ಭಗವದ್ಗೀತೆ ಪಠಣದ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಭಗವದ್ಗೀತ ಸಪ್ತಾಹ ಉದ್ಘಾಟನೆ  ಫೆ. 17ರಂದು ಸಂಜೆ 6.30ಕ್ಕೆ ನಡೆಯಲಿದೆ. ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಬಿ. ಶೇಷಾದ್ರಿ ಅಧ್ಯಕ್ಷತೆ ವಹಿಸಲಿದ್ದಾರೆ. ವೈದ್ಯ ಡಾ.ಎಸ್.ಜೆ. ಮಹಿಪಾಲ್ ಉದ್ಘಾಟಿಸುವರು. ಬಳ್ಳಾರಿ ವಕೀಲರ ಸಂಘದ ಅಧ್ಯಕ್ಷ ಪಾಟೀಲ್ ಸಿದ್ದಾರೆಡ್ಡಿ ಭಾಗವಹಿಸುವರು ಎಂದರು. ತಿರುಪತಿಯ ಡಾ. ಎಚ್.ಎಸ್. ಬ್ರಹ್ಮಾನಂದ ಶಾಸ್ತ್ರ ಭಾಗವತರು ಪ್ರತಿದಿನ ಸಂಜೆ 6.30ರಿಂದ 8ರ ವರೆಗೆ ಭಗವದ್ಗೀತೆ ಪ್ರವಚನ ಮಾಡಲಿದ್ದಾರೆ ಎಂದರು.
ಫೆ. 23ರಂದು ಭಾನುವಾರ ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ನಿವೃತ್ತ ನ್ಯಾಯಮೂರ್ತಿ, ಮಾಜಿ ಸಂಸದ ಎನ್.ವೈ. ಹನುಮಂತಪ್ಪನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಂಸದ ಕೋಳೂರು ಬಸವನಗೌಡ, ಉದ್ಯಮಿ ಡಾ. ಡಿ.ಎಲ್. ರಮೇಶ್ ಗೋಪಾಲ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. ಕಾರ್ಯದರ್ಶಿ ಪಿ. ಗಾದೆಪ್ಪ, ಉಪಾಧ್ಯಕ್ಷ, ವಕೀಲ ಕೆ. ಕೋಟೇಶ್ವರ ರಾವ್, ಖಜಾಂಚಿ ಅಲ್ಲಂ ದೊಡ್ಡಪ್ಪ, ನರಸೇಪಲ್ಲಿ ನಾಗರಾಜ್, ಉದ್ಯಮಿ ಭೀಮರೆಡ್ಡಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement