ಇಂದು ಕಾಂಗ್ರೆಸ್ ಸಭೆ
ಕೂಡ್ಲಿಗಿ: ಕೂಡ್ಲಿಗಿ ಮತ್ತು ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಪಟ್ಟಣದ ಪಿರಾಮಿಡ್ನಲ್ಲಿ ಫೆ.17ರಂದು ನಡೆಯಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.
ಸುಮೋ ಪಲ್ಟಿ: ಸಾವು
ಹೂವಿನಹಡಗಲಿ: ತಾಲೂಕಿನ ಹೊಳಲು ಮತ್ತು ಬೂದನೂರು ಗ್ರಾಮಗಳ ಮಧ್ಯೆ ಟಾಟಾ ಸುಮೋ ವಾಹನ ಪಲ್ಟಿಯಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, 8 ಜನರಿಗೆ ಗಾಯಗಳಾದ ಘಟನೆ ಭಾನುವಾರ ಸಂಜೆ ಜರುಗಿದೆ. ಬಳ್ಳಾರಿ ತಾಲೂಕಿನ ಚಿತಗುಂಟೆ ಗ್ರಾಮದ ಸಿದ್ಧಲಿಂಗಪ್ಪ (30) ಮೃತಪಟ್ಟಿದ್ದು ಉಳಿದ 8 ಜನರಿಗೆ ಗಂಭೀರ ಗಾಯಗಳಾಗಿ ಹೊಳಲು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಮೈಲಾರಲಿಂಗೇಶ್ವರ ಜಾತ್ರೆಗೆಂದು ಬಳ್ಳಾರಿಯ ಸಂಗನಕಲ್ಲು ಹಾಗೂ ಚಿತಗುಂಟೆ ಗ್ರಾಮದವರು ಟಾಟಾ ಸುಮೋದಲ್ಲಿ ಮೈಲಾರ ಕಡೆಗೆ ಹೋಗುವಾಗ ವಾಹನ ಪಲ್ಟಿಯಾಗಿದೆ. ಹೊಳಲು ಉಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.