ಲಾರಿ ಡಿಕ್ಕಿ: ಓರ್ವ ಸಾವು
ಬಳ್ಳಾರಿ: ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ನಗರದ ಸಿರುಗುಪ್ಪ ರಸ್ತೆಯಲ್ಲಿ ಭಾನುವಾರ ನಡೆದಿದೆ. ಮೃತನನ್ನು ಹೊಳಗುಂದ ಗ್ರಾಮದ ಬಸವರಾಜ್ (25) ಎಂದು ಗುರುತಿಸಲಾಗಿದೆ. ಈತನು ಹೊಳಗುಂದ ಗ್ರಾಮದಿಂದ ಬಳ್ಳಾರಿಗೆ ಬೈಕ್ನಲ್ಲಿ ಬರುತ್ತಿದ್ದಾಗ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಸವರಾಜ್ ಮೃತಪಟ್ಟಿದ್ದು, ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿಯ ಅನೈತಿಕ ಸಂಬಂಧ ನೇಣಿಗೆ ಶರಣಾದ ಪತಿ
ಹಗರಿಬೊಮ್ಮನಹಳ್ಳಿ: ಪರ ಪುರುಷನ ಜತೆಗೆ ಪತ್ನಿಯ ಅನೈತಿಕ ಸಂಬಂಧ ಇದೆ ಎಂದು ಮನನೊಂದ ಪತಿ, ಆತ್ಮಹತ್ಯೆಗೆಶರಣಾದ ಘಟನೆ ತಾಲೂಕಿನ ಗಡಿಗ್ರಾಮ ಸಿಗೇನಹಳ್ಳಿ 2ನೇ ಕಾಲನಿಯಲ್ಲಿ ಶನಿವಾರ ರಾತ್ರಿ ಜರುಗಿದೆ. ದೊಡ್ಡಬಸಪ್ಪ (36) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ಎಂದು ಗುರುತಿಸಲಾಗಿದೆ. ಪ್ರಕರಣ ತಾಲೂಕಿನ ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪತ್ನಿಯ ಅನೈತಿಕ ಸಂಬಂಧ ಇದೆ ಎಂದು ತಿಳಿದು ಹೊಲದಲ್ಲಿಯೇ ದೊಡ್ಡಬಸಪ್ಪ ಕ್ರಿಮಿನಾಶಕ ಸೇವಿಸಿದ್ದಾನೆ. ಘಟನೆ ಮಧ್ಯಾಹ್ನ ಜರುಗಿದ್ದರೂ ಅದು ಮನೆಯವರಿಗೆ ಗೊತ್ತಾಗಿದ್ದು ಸಂಜೆ. ಹೀಗಾಗಿ ಪ್ರಕರಣ ರಾತ್ರಿ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಪ್ಯೂಟರ್ ಕಳ್ಳತನ
ಬಳ್ಳಾರಿ: ನಗರದ ರೇಡಿಯೋ ಪಾರ್ಕಿನಲ್ಲಿರುವ ಜೆಸ್ಕಾಂ ಕಚೇರಿಯಲ್ಲಿನ ರು. 65 ಸಾವಿರ ಮೌಲ್ಯದ ಕಂಪ್ಯೂಟರ್ ಹಾಗೂ ಬ್ಯಾಟರಿ ಕಳುವಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ರೇಡಿಯೋ ಪಾರ್ಕ್ನಲ್ಲಿರುವ ಜೆಸ್ಕಾಂ ಕಚೇರಿಗೆ ಶುಕ್ರವಾರ ಸಂಜೆ ಬೀಗ ಹಾಕಿಕೊಂಡು ಹೋಗಿದ್ದಾರೆ. ರಾತ್ರಿಯಲ್ಲಿ ಬೀಗ ಮುರಿದು, ಕಚೇರಿಯಲ್ಲಿದ್ದ ಒಂದು ಕಂಪ್ಯೂಟರ್, ಎರಡು ಬ್ಯಾಟರಿ ಕಳುವು ಮಾಡಲಾಗಿದೆ. ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜು ಅಡ್ಡೆಗೆ ದಾಳಿ: ಇಬ್ಬರ ಸೆರೆ
ಬಳ್ಳಾರಿ: ಜೂಜಾಟ ಅಡ್ಡೆ ಮೇಲೆ ಕುಡಿತಿನಿ ಪೊಲೀಸರು ದಾಳಿ ಮಾಡಿ, 2 ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ, ರು. 3,440 ವಶಪಡಿಸಿಕೊಂಡ ಘಟನೆ ಸಿದ್ದಮನಹಳ್ಳಿ, ದೇವಲಾಪುರದಲ್ಲಿ ನಡೆದಿದೆ. ಸಿದ್ದನಹಳ್ಳಿಯಲ್ಲಿ ಡಿವೈಎಸ್ಪಿ ರುದ್ರಮುನಿ ಮಾರ್ಗದರ್ಶನದಲ್ಲಿ ಕುಡಿತಿನಿ ಪಿಎಸ್ಐ ವಾಸುಕುಮಾರ್, ಸಿಬ್ಬಂದಿ ದಾಳಿ ಮಾಡಿದ್ದಾರೆ. ರಾಮಪನನ್ನು ಬಂಧಿಸಿ, ರು. 1,840 ವಶಪಡಿಸಿಕೊಂಡಿದ್ದಾರೆ. ದೇವಲಾಪುರದಲ್ಲಿ ಮಟಕಾ ಜೂಜಾಟ ಅಡ್ಡೆ ಮೇಲೆ ದಾಳಿ ಮಾಡಿ, ಬಸಪ್ಪ ಎನ್ನುವ ಆರೋಪಿಯನ್ನು ಬಂಧಿಸಿ, ಅವರಿಂದ ರು. 1,600 ವಶಪಡಿಸಿಕೊಂಡಿದ್ದಾರೆ. ಕುಡಿತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.