ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಗಣಿ ನಾಡಲ್ಲಿ ಸಾಹಿತ್ಯದ ಮೊನಚಿದೆ

Mainashree
Updated On : 18 Feb 2014, 11:20 am

ಕನ್ನಡಪ್ರಭ ವಾರ್ತೆ, ಕಂಪ್ಲಿ, ಫೆ. 17
ಗಂಡುಗಲಿ ಕುಮಾರರಾಮನ ಬೀಡಾದ ಐತಿಹಾಸಿಕ ಕಂಪ್ಲಿ ಪಟ್ಟಣದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ಸಂಜೆ ಸಂಭ್ರಮದ ತೆರೆ ಎಳೆಯಲಾಯಿತು.
ಎಂ.ಪಿ. ಪ್ರಕಾಶ ವೇದಿಕೆಯಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಬಳ್ಳಾರಿ ಖ್ಯಾತಿಗೂ ಪ್ರಖ್ಯಾತಿಗೂ ದೊಡ್ಡ ಹೆಸರು ಮಾಡಿದೆ. ಗಣಿ ಜಿಲ್ಲೆಯಲ್ಲಿ ಇಂದಿಗೂ ಸಾಹಿತ್ಯದ ಮೊನಚು, ಹರಿತದ ಗುಣ ಜೀವಂತವಿದೆ ಎನ್ನುವುದಕ್ಕೆ ಎರಡು ದಿನಗಳ ಸಾಹಿತ್ಯ ಸಮ್ಮೇಳನವೆ ಸಾಕ್ಷಿ. ಜಿಲ್ಲೆಯ ಸಾಹಿತ್ಯ ಶ್ರೀಮಂತಿಕೆಯನ್ನು ಸಾರುವ ಅನೇಕ ಲೇಖಕರು ಜಿಲ್ಲೆಯಲ್ಲಿದ್ದಾರೆ. ಜಿಲ್ಲಾ ಸಾಹಿತ್ಯ ಸಮ್ಮೇಳನ ಸಂತೋಷ ತಂದಿದೆ ಎಂದರು.
ಸಮ್ಮೇಳನಾಧ್ಯಕ್ಷ ಪ್ರೊ.ಷ. ಶೆಟ್ಟರ್ ಮಾತನಾಡಿ, ಸಾಹಿತ್ಯ ಸಮ್ಮೇಳನ ಅಕ್ಷರದ ಬಗ್ಗೆ ಗಮನ ಸೆಳೆದಿದೆ. ಅಕ್ಷರವಿಲ್ಲದವರು ಆದಿ ಮಾನವರಾಗುತ್ತಾರೆ. ಅಕ್ಷರ ಬಂದಾಗ ಇತಿಹಾಸ ಪ್ರಾರಂಭವಾಗುತ್ತದೆ. ಅಕ್ಷರ ಮೂಡಿದಾಗ ವಿದ್ಯಾವಂತರ ಕ್ಷೇತ್ರವಾಗುತ್ತದೆ ಎಂದು ಹೇಳಿದರು.
ಕಸವು ರಸವಾದೀತು ನೋಡಾ, ಮರಳು ಮಾಣಿಕ್ಯವಾದೀತು ನೋಡಾ, ಕಲ್ಲು ತಿನ್ನುವ ಪ್ರಾಣಿಗಳು ಬಂದಾವ ನೋಡಾ... ಎನ್ನುವ ಮೂಲಕ ಜಿಲ್ಲೆಯ ಗಣಿ ಉದ್ಯಮ ಜಿಲ್ಲೆಗೆ ಲಗ್ಗೆ ಇಟ್ಟಿದ್ದನ್ನು ಬಣ್ಣಿಸಿದರು. ಗಣಿ ಒಂದು ವ್ಯವಹಾರವಾಗಿ ಇರಬೇಕು. ಅದು ಪ್ರಕೃತಿ ನಾಶಕ್ಕೆ ದಾರಿಯಾಗಬಾರದು ಎಂದು ಎಚ್ಚರಿಸಿದರು.
ರಂಗಕರ್ಮಿ ನಾಡೋಜ ನಾಗರತ್ನಮ್ಮ, ಹೊಸಪೇಟೆ ವಿಜಯನಗರ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ, ಡಿಎಸ್‌ಎಸ್ ಸಂಘಟನಾ ಸಂಚಾಲಕ ಮುಂಡರಗಿ ನಾಗರಾಜ, ವೀವಿ ಸಂಘ ಅಧ್ಯಕ್ಷ ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ, ಉದ್ಯಮಿ ಗೊಗ್ಗ ಚನ್ನಬಸವರಾಜ, ಜಗದೀಶ್ ರಾಯ್ಕರ್, ಬಿ.ವಿ. ಬಸವರಾಜ, ವಕೀಲ ಜೆ.ಎಸ್. ಬಸವರಾಜ, ಹಾವಿನಹಾಳ್ ಶರಣಪ್ಪ, ಪಿಎಸ್‌ಐ ಎಚ್. ದೊಡ್ಡಣ್ಣ, ಕಸಾಪ ಜಿಲ್ಲಾಧ್ಯಕ್ಷ ಸಿರಿಗೇರಿ ಎರ್ರಿಸ್ವಾಮಿ, ಕಸಾಪ ಹೊಸಪೇಟೆ ತಾಲೂಕು ಅಧ್ಯಕ್ಷ ಅಗಳಿ ಪಂಪಾಪತಿ, ಕಸಾಪ ಕಂಪ್ಲಿ ಹೋಬಳಿ ಘಟಕ ಅಧ್ಯಕ್ಷ ವಿ. ವಿದ್ಯಾಧರ, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ಅರವಿ ಬಸವನಗೌಡ, ಎಂ. ರಾಜೇಂದ್ರಕುಮಾರಸ್ವಾಮಿ, ಬಿ. ಸಿದ್ದಪ್ಪ, ಜಿ.ವಿ. ಸತ್ಯನಾರಾಯಣಬಾಬು, ಕೆ. ಮನೋಹರ, ಎ.ಸಿ. ದಾನಪ್ಪ, ಸಿ.ಆರ್. ಹನುಮಂತ, ಕೆ.ಎಸ್. ಚಾಂದ್‌ಬಾಷಾ, ಪಿ. ಮೂಕಯ್ಯಸ್ವಾಮಿ, ಕೆ. ಶ್ರೀನಿವಾಸರಾವ್, ಬಿ. ನಾರಾಯಣಪ್ಪ, ಬಿ. ನಾಗೇಶ್ವರರಾವು, ಸೈಯದ್ ಉಸ್ಮಾನ್, ಕೆ. ಮೆಹಬೂಬ್, ಕೆ. ಸರಸ್ವತಮ್ಮ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement