ಪಿಕಾರ್ಡ್ ಬ್ಯಾಂಕ್ ಚುನಾವಣೆ: ಆಯ್ಕೆ
ಕೊಟ್ಟೂರು: ಕೂಡ್ಲಿಗಿ ತಾಲೂಕು ಕೊಟ್ಟೂರೇಶ್ವರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಕಾರ್ಡ್) ಬ್ಯಾಂಕ್ಗೆ ಭಾನುವಾರ ನಡೆದ ಚುನಾವಣೆಯಲ್ಲಿ ಪಿ.ಎಚ್. ರಾಘವೇಂದ್ರ 307, ಬಂಡಿ ಮಾರೆಪ್ಪ (ಗುಡೇಕೋಟೆ) 143, ಡಿ. ನಾಗೇಶ್ (ಮಲ್ಲನಾಯಕನಹಳ್ಳಿ) 152, ಡಾ.ಜೆ.ಕೆ. ದಯಾನಂದ 11 ಮತ್ತು ಕೆ. ಮೂರ್ತಿ 17 ಮತ ಪಡೆದು ಗೆದ್ದರು. ಬ್ಯಾಂಕಿನ ಒಟ್ಟು 11 ನಿರ್ದೇಶಕರ ಸ್ಥಾನಗಳ ಪೈಕಿ ಈಗಾಗಲೇ 6 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದು ಉಳಿದ 5 ಸ್ಥಾನಗಳಿಗೆ ಚುನಾವಣೆ ನಡೆಯಿತು. ಇಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಪಿಕಾರ್ಡ್ ಬ್ಯಾಂಕ್ಗೆ ನಡೆದ ಮತಗಳ ಎಣಿಕಾ ಕಾರ್ಯದಲ್ಲಿ, ಸಾಲಗಾರರಲ್ಲದ ಕೊಟ್ಟೂರು ಮತಕ್ಷೇತ್ರದಿಂದ ರಾಘವೇಂದ್ರ ತಮ್ಮ ಪ್ರತಿಸ್ಪರ್ಧಿ ವಿ. ಲೋಕೇಶರನ್ನು (163) ಪರಭಾವಗೊಳಿಸಿದರೆ, ಸಾಲಗಾರರಲ್ಲ ಕೂಡ್ಲಿಗಿ ಕ್ಷೇತ್ರದಿಂದ ಬಂಡಿಮಾರಪ್ಪ ತಮ್ಮ ಪ್ರತಿಸ್ಪರ್ಧಿ ಕೆ. ಮಂಜುನಾಥ (106)ರನ್ನು ಪರಾಭಾವಗೊಳಿಸಿದರು. ಸಾಲಗಾರರ ಕೂಡ್ಲಿಗಿ ಮತಕ್ಷೇತ್ರದಿಂದ ಡಿ. ನಾಗೇಶ್, ಕ್ಯಾತಲ ಕೊಟ್ರಪ್ಪ (27)ರನ್ನು ಸೋಲಿಸಿದರು. ಸಾಲಗಾರರ ಗುಡೇಕೋಟೆ ಕ್ಷೇತ್ರದಿಂದ ಡಾ. ಜೆ.ಕೆ. ದಯಾನಂದ, ದಿನ್ನೆ ನಾಗರಾಜ (7) ಪರಾಭಾವಗೊಳಿಸಿದರು. ಸಾಲಗಾರರ ಹುಡೇಂ ಕ್ಷೇತ್ರದಿಂದ ಕೆ. ಮೂರ್ತಿ, ಎಂ. ಪೋಲಯ್ಯ(10) ನವರನ್ನು ಸೋಲಿಸಿದ್ದಾರೆ. ಪ್ರಸಕ್ತ ಸಾಲಿಗೆ ಅಧ್ಯಕ್ಷರಾಗಿದ್ದ ಗುಡೇಕೋಟೆಯ ದಿನ್ನೆ ನಾಗರಾಜ ಕೇವಲ 7 ಮತ ಗಳಿಸಿ ಹಾಲಿ ನಿರ್ದೇಶಕ ಜಯಾನಂದ ವಿರುದ್ಧ ಸೋತರು.