ಮೋದಿ ಪ್ರಧಾನಿಯಾದರೆ ದೇಶಕ್ಕೆ ಉತ್ತಮ: ಎನ್.ಟಿ. ಬೊಮ್ಮಣ್ಣ
ಕೂಡ್ಲಿಗಿ: ಪ್ರಸ್ತುತ ದೇಶದ ಸ್ಥಿತಿಗತಿ ನೋಡಿದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸಮರ್ಥ ನಾಯಕರಾಗಿದ್ದಾರೆ. ಅವರು ಪ್ರಧಾನಿಯಾದರೆ ದೇಶಕ್ಕೆ ಉತ್ತಮ ಎಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಅಭಿಪ್ರಾಯಿಸಿದರು.
ಅವರು ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಮೋ ಟೀ ಸ್ಟಾಲ್ಗೆ ಚಾಲನೆ ನೀಡಿ ಮಾತನಾಡಿ, ದೇಶದಲ್ಲಿ ಬಿಜೆಪಿ ಪರ ಅಲೆಯಿದೆ. ಪ್ರತಿಯೊಬ್ಬರೂ ಬಿಜೆಪಿ ಬೆಂಬಲಕ್ಕೆ ತುಡಿಯುತ್ತಿದ್ದಾರೆ. ಅವರೆಲ್ಲರ ಬೆಂಬಲದಿಂದ ಮೋದಿ ಪ್ರಧಾನಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ದೇಶ ಮುನ್ನಡೆಸುವಷ್ಟು ಸಮರ್ಥರಲ್ಲ. ಕಾಂಗ್ರೆಸ್ ನಿಷ್ಠಾವಂತರನ್ನು ಕಡೆಗಣಿಸುವ ಪಕ್ಷ. ಅದರ ಸಹವಾಸವೆ ಸಾಕೆಂದು ಬಿಜೆಪಿ ಸೇರಿದ್ದೇನೆ ಎಂದು ತಮ್ಮ ಮನದಾಳದ ನೋವನ್ನು ತೋಡಿಕೊಂಡರು. ಕಾಂಗ್ರೆಸ್ ಮುಖಂಡರ ತಮ್ಮನ್ನು ರಾಜಕೀಯವಾಗಿ ತುಳಿಯಬೇಕೆಂಬ ಆಸೆ ಈಡೇರುವುದಿಲ್ಲ. ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಸಂಘಟಿಸಿ ಕಾಂಗ್ರೆಸ್ಗೆ ತಕ್ಕ ಉತ್ತರ ನೀಡುತ್ತೇನೆ. ಈ ಬಾರಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಮೂಲಕ ಮೋದಿ ಪ್ರಧಾನಿಯಾಗುವುದು ಶತಸಿದ್ಧ. ಜಿಲ್ಲೆಯಲ್ಲಿ ಬಿಜೆಪಿಯಿಂದ ಎಂಪಿ ಅಭ್ಯರ್ಥಿ ಯಾರೆ ಆದರೂ ಪಕ್ಷದ ಗೆಲವಿಗೆ ಶ್ರಮಿಸಲು ಮುಂದಾಗುವುದಾಗಿ ತಿಳಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಸಿ. ರೇವಣಸಿದ್ಧಪ್ಪ, ಪ್ರಧಾನ ಕಾರ್ಯದರ್ಶಿ ಎಕ್ಕೆಗೊಂದಿ ನಾಗರಾಜ, ಎಸ್ಟಿ ಮೋರ್ಚಾ ಅಧ್ಯಕ್ಷ ನರಸಿಂಹಪ್ಪ, ಯುವ ಮುಖಂಡರಾದ ಸುನಿಲ್ಗೌಡ, ಯುವ ಮೋರ್ಚಾ ಅಧ್ಯಕ್ಷ ಧನಂಜಯಗೌಡ, ಉಪಾಧ್ಯಕ್ಷ ಹೊಸಹಳ್ಳಿ ಕರಿವೀರಪ್ಪ, ಜಿನ್ನಿನ ರಾಮಣ್ಣ, ದಡ್ಡಯ್ಯ, ಶ್ರೀನಿವಾಸ, ಎಸ್ಸಿ ಮೋರ್ಚಾ ಅಧ್ಯಕ್ಷ ತಿಪ್ಪೇಸ್ವಾಮಿ, ಹಿಂದುಳಿದ ವರ್ಗಗಳ ಘಕದ ಅಧ್ಯಕ್ಷ ವೆಂಕಟೇಶ್ ಆಚಾರ್ಯ, ನಗರ ಘಟಕ ಅಧ್ಯಕ್ಷ ಶಂಕ್ರಪ್ಪ ಮಂಜುನಾಥ, ಜಂಬುನಾಥ, ಜಿ.ಬಿ. ಪಾಪಯ್ಯ, ಮಧುಸೂದನ್, ಸಿ. ನಾಗರಾಜ, ತಿಪ್ಪೇಸ್ವಾಮಿ, ಚಿಕ್ಕಜೋಗಿಹಳ್ಳಿ ನಾಗಣ್ಣ, ವಕೀಲ ಚನ್ನಪ್ಪ, ಜಿ.ಬಿ. ಮಂಜುನಾಥ ಇತರರಿದ್ದರು.