ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸುದ್ದಿ ಸಂಕ್ಷೇಪ

Mainashree
Updated On : 18 Feb 2014, 11:10 am

ಇಂದು ದುರುಗಮ್ಮ ಜಾತ್ರೆ
ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿಯ ರಾಂಪುರದ ದುರುಗಮ್ಮ ಜಾತ್ರಾ ಮಹೋತ್ಸವ ಫೆ. 18 ಮತ್ತು 19ರಂದು ನಡೆಯಲಿದೆ. ಫೆ. 18ರಂದು ದೇವಿಗೆ ವಿಶೇಷ ಅಲಂಕಾರ, ಮಕ್ಕಳಿಂದ ಉಡಿ ತುಂಬಿವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10.30ಕ್ಕೆ  ಡೊಳ್ಳು, ವಿವಿದ ವಾದ್ಯಗಳೊಂದಿಗೆ ಗಂಗಾಪೂಜೆ ನಡೆಯಲಿದೆ. ನಂತರ ರಾತ್ರಿ ದುರ್ಗಾದೇವಿಗೆ ಮಹಾಮಂಗಳಾರತಿ ನಡೆಯಲಿದೆ. ಫೆ. 19ರಂದು ಮಧ್ಯಾಹ್ನ 3.30ಕ್ಕೆ ದೇವಿಯ ಪಟ ಹರಾಜು ಹಾಗೂ ಹೂವಿನ ಹಾರ ಹರಾಜು ನಡೆಯಲಿದೆ. ರಾತ್ರಿ 9.30ಕ್ಕೆ ಅಗ್ನಿಕುಂಡ ಕಾರ್ಯಕ್ರಮ, ಮಹಾ ಮಂಗಳಾರತಿ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಕಾಲುಬಾಯಿಗೆ ಲಸಿಕೆ
ಬಳ್ಳಾರಿ:  ಜಿಲ್ಲೆಯಲ್ಲಿ ಫೆ. 15ರಿಂದ ಮಾರ್ಚ್ 14ರ ವರೆಗೆ 6ನೇ ಸುತ್ತಿನ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕ ಡಾ. ಜಿ. ಪಂಪಾಪತಿ ತಿಳಿಸಿದ್ದಾರೆ. ಕಾಲುಬಾಯಿ ಬೇನೆ ಜಾನುವಾರುಗಳಲ್ಲಿ ಕಂಡುಬರುವ ಸಾಂಕ್ರಾಮಿಕ ರೋಗವಾಗಿದ್ದು, ಈ ರೋಗದಿಂದ ಮರಣವನ್ನಪ್ಪುವ ರಾಸುಗಳ ಸಂಖ್ಯೆ ಕಡಿಮೆಯಿದ್ದರೂ, ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಪುರಸ್ಕೃತ ಯೋಜನೆಯ ಕಾಲುಬಾಯಿ ಜ್ವರ ರೋಗ ನಿಯಂತ್ರಣ ಕಾರ್ಯಕ್ರಮದಡಿ ಈ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಿಲ್ಲೆಯಲ್ಲಿ 2010-11ರಿಂದ ಈ ವರೆಗೂ 5 ಸುತ್ತುಗಳಲ್ಲಿ ಲಸಿಕೆ ಹಾಕಲಾಗಿದ್ದು, ವರ್ಷಕ್ಕೆರಡು ಬಾರಿಯಂತೆ ಪ್ರತಿ ವರ್ಷ ಫೆಬ್ರುವರಿ ಮತ್ತು ಆಗಸ್ಟ್  ತಿಂಗಳಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ವಿಶೇಷ ತಂಡ ರಚನೆ: ಜಿಲ್ಲೆಯ ಎಲ್ಲ ತಾಲೂಕಿನ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ದನ, ಎಮ್ಮೆ ಮತ್ತು ಹಂದಿಗಳಿಗೆ ಲಸಿಕೆ ನೀಡಲು ಪಶುವೈದ್ಯಾಧಿಕಾರಿಗಳ ನೇತೃತ್ವದಲ್ಲಿ 16 ವಿಶೇಷ ಲಸಿಕಾ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಪ್ರತೀ ಗ್ರಾಮಕ್ಕೆ ನಿಗದಿತ ದಿನದಂದು ಭೇಟಿ ನೀಡಿ ಜಾನುವಾರಿಗೆ ಲಸಿಕೆ ನೀಡಲಿವೆ. ಲಸಿಕಾ ದಿನದ ವಿವರಗಳನ್ನು ಈಗಾಗಲೇ ಕರಪತ್ರಗಳ ಮೂಲಕ ಹಂಚಲಾಗಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಪಶುವೈದ್ಯ ಆಸ್ಪತ್ರೆ ಅಥವಾ ಆಯಾ ತಾಲೂಕು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.
ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿ: ಆಶಾರಾಣಿ
ಬಳ್ಳಾರಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಬೇಕು ಎಂದು ವೈದ್ಯೆ ಡಾ.ಎ.ಎನ್.ಎಂ. ಆಶಾರಾಣಿ ಸಲಹೆ ನೀಡಿದರು.
ನಗರದ ತಾಳೂರು ರಸ್ತೆಯ ಶಾಂತಿ ಶಿಶು ವಿಹಾರದ 58ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿದಾಗ ಅವರಲ್ಲಿನ ಪ್ರತಿಭೆ ಅರಳುತ್ತದೆ. ವ್ಯಕ್ತಿತ್ವ ವಿಕಸನ ಹೊಂದಲು ಸಹಕಾರಿಯಾಗುತ್ತದೆ. ಜತೆಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಇಂಬು ನೀಡುತ್ತವೆ ಎಂದರು.
ಕರ್ನಾಟಕ ಜನಶಕ್ತಿ ಸಂಘದ ರಾಜ್ಯಾಧ್ಯಕ್ಷ ಪ್ರತಾಪ್ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಂತಿ ವಿದ್ಯಾ ಕೇಂದ್ರದ ಉಪಾಧ್ಯಕ್ಷ ಪ್ರಕಾಶ್ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸತತ ಐವತ್ತು ವರ್ಷಗಳಿಂದ ಜ್ಞಾನ ದಾಸೋಹದಲ್ಲಿ ನಿರತವಾಗಿರುವ ಶಾಂತಿ ಶಿಶುವಿಹಾರ, ವಿಜಯ ಪ್ರೌಢಶಾಲೆ ಶಿಕ್ಷಣ ಕ್ಷೇತ್ರಕ್ಕೆ ತನ್ನದೆ ಆದ ವಿಶೇಷ ಕೊಡುಗೆ ನೀಡಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ 35 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಎಸ್. ಗಿರಿಜಾ ಅವರನ್ನು ಸನ್ಮಾನಿಸಲಾಯಿತು. ಶಾಲಾ ಸಿಬ್ಬಂದಿ ವರ್ಗ ಹಾಗೂ ಇತರರಿದ್ದರು. ಮುಖ್ಯಶಿಕ್ಷಕಿ ಎಸ್. ಲಕ್ಷ್ಮಿ ಸ್ವಾಗತಿಸಿದರು. ಶಿಕ್ಷಕಿ ಸೀತಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement