ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸುದ್ದಿ ಸಂಕ್ಷೇಪ

Mainashree
Updated On : 18 Feb 2014, 11:14 am

ಇಂದು ಸಾಲ ಉತ್ಸವ
ಬಳ್ಳಾರಿ: ಬಳ್ಳಾರಿಯ ಪ್ರಗತಿ-ಕೃಷ್ಣಾ ಗ್ರಾಮೀಣ ಬ್ಯಾಂಕ್ ವತಿಯಿಂದ ಫೆ. 18ರಂದು ರಿಟೇಲ್ ಸಾಲಗಳ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವು ಸ್ಥಳೀಯ ಗಾಂಧಿನಗರದ ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದ್ದು, ಪ್ರಧಾನ ಜಿಲ್ಲಾ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ ಉದ್ಘಾಟಿಸಲಿದ್ದಾರೆ. ಪ್ರಗತಿ- ಕೃಷ್ಣಾ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಎಂ.ಜಿ. ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಎಸ್.ಕೆ.ಕೆ. ಭಾರದ್ವಾಜ್, ಮಹಾ ಪ್ರಬಂಧಕ ಜಿ.ಎಸ್. ರವಿಸುಧಾಕರ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಕಾರ್ಯಕ್ರಮ
ಬಳ್ಳಾರಿ: ನೆಹರು ಯುವ ಕೇಂದ್ರ ಜಿಲ್ಲಾ ಘಟಕ, ಶ್ರೀ ರೇಣುಕಾ ಗ್ರಾಮೀಣ ಅಭಿವೃದ್ಧಿ ಕೇಂದ್ರ ಇವರ ಸಹಯೋಗದಲ್ಲಿ ಫೆ. 18ರಿಂದ 20ರ ವರೆಗೆ ಸ್ಥಳೀಯ ಗಾಂಧಿನಗರದಲ್ಲಿ ಯುವ ಮುಂದಾಳತ್ವ, ವ್ಯಕ್ತಿತ್ವ ವಿಕಸನ ಹಾಗೂ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮವನ್ನು ರತಿಕಪಾಡಿಯ ಉದ್ಘಾಟಿಸುವರು. ಹನುಮಂತರೆಡ್ಡಿ ಅಧ್ಯಕ್ಷತೆ ವಹಿಸುವರು. ಅತಿಥಿಯಾಗಿ ರಜನಿ ಭಾಗವಹಿಸುವರು. ಉಪನ್ಯಾಸಕರಾಗಿ ಕನ್ನಡ ವಿವಿಯ ಸಂಶೋಧಕಿ ಅರುಣಾ ಜೋಳದ, ಸೋಮೇಶ ಹುಪುರ ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಡಿ. ದಯಾನಂದ ತಿಳಿಸಿದ್ದಾರೆ.
ಭಾಷೆ ಕುರಿತು ಗ್ರಾಮೀಣರಲ್ಲಿ ಜಾಗೃತಿ ಬೇಕು: ಸಿದ್ದರಾಮ ಹಿರೇಮಠ
ಕೂಡ್ಲಿಗಿ: ನಾಡು ನುಡಿಯ ಬಗ್ಗೆ ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ಭಾಷೆಯ ಮತ್ತು ನಾಡಿನ ಅಸ್ತಿತ್ವಕ್ಕೆ  ಧಕ್ಕೆಯಾದರೆ ಮುಂದೆ ಬಂದು ಹೋರಾಟ ಮಾಡಲು ಸಿದ್ಧರಾಗುವಂತೆ ಮನವೊಲಿಸಬೇಕು. ಇದಕ್ಕೆ ಪ್ರಜ್ಞಾವಂತ ಜನರು ಸಹಕರಿಸಬೇಕು ಎಂದು ಸಾಹಿತಿ ಸಿದ್ದರಾಮ ಹಿರೇಮಠ ಹೇಳಿದರು.
ಅವರು ತಾಲೂಕಿನ ಕ್ಯಾಸನಕೆರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚೌಡಪುರ ಸಿಆರ್‌ಸಿ ಮತ್ತು ತಾಲೂಕು ಕಸಾಪ ಆಯೋಜಿಸಿದ್ದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತ, ಶಿಕ್ಷಣ ಕ್ಷೇತ್ರಕ್ಕೂ ಕನ್ನಡ ಸಾಹಿತ್ಯಕ್ಕೂ ಅವಿನಾಭಾವ ಸಂಬಂಧ ಇದ್ದು, ಶಿಕ್ಷಣ ಕ್ಷೇತ್ರ ಸಾಹಿತ್ಯ ರಂಗ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮಂಜುನಾಥ ಮಾತನಾಡಿ, ಪ್ರಪಂಚದಲ್ಲಿ ಅತಿ ಸುಂದರ ಭಾಷೆಗಳಲ್ಲಿ ಕನ್ನಡ ಸೇರಿದ್ದು, ಇಂತಹ ಭಾಷೆ ತನ್ನದೆ ಆದ ಇತಿಹಾಸ ಹೊಂದಿದೆ ಎಂದು ತಿಳಿಸಿದರು.
ಕೊಟ್ಟೂರು ಎಪಿಎಂಸಿ ಅಧ್ಯಕ್ಷ ಜೆ.ಸಿ. ಶಶಿಧರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚೌಡಪುರ ಗ್ರಾಪಂ ಅಧ್ಯಕ್ಷೆ ಹನುಮಕ್ಕ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಮೀನಾಕ್ಷಮ್ಮ ವಿಠೋಬಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ವಿ. ಕೊತ್ಲಪ್ಪ, ಕಸಾಪ ತಾಲೂಕು ಕಾರ್ಯದರ್ಶಿ ಕೆ.ಎಂ. ವೀರೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟೇಶ, ಶಿಕ್ಷಣ ಇಲಾಖೆಯ ಶಿವಕುಮಾರಸ್ವಾಮಿ, ಷಣ್ಮುಖಪ್ಪ ಚೌಡಾಪುರ, ಶಿಕ್ಷಣ ಸಂಯೋಜಕ ನಂದಿ ಬಸವರಾಜ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement