ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸ್ವಸ್ತಿಕ್ ನಾಗರಾಜ್ ವಿಚಾರಣೆ ಮಾ. 21ಕ್ಕೆ

Vishwanath S
Updated On : 22 Feb 2014, 10:57 am

ಸಂಡೂರು: ತಾಲೂಕಿನ ರಾಜಾಪುರ ಹತ್ತಿರದ ಕೃಷಿ ಜಮೀನಿನಿಂದ ರಾಜಧನ ಕಟ್ಟದೇ 75 ಟನ್ ಅದಿರಿನ ಅಕ್ರಮ ಸಾಗಾಟದ ಆರೋಪದ ವಿಚಾರಣೆ ಹಿನ್ನೆಲೆಯಲ್ಲಿ ಅದಿರು ವ್ಯಾಪಾರಿ ಸ್ವಸ್ತಿಕ್ ನಾಗರಾಜ್ನನ್ನು ಗುರುವಾರ ಜೆಎಂಎಫ್ಸಿ ನ್ಯಾಯಾಲಯಕ್ಕೆ ಪೊಲೀಸರು ಕರೆತಂದಿದ್ದರು. ಸರ್ಕಾರಿ ಅಭಿಯೋಜಕರ ಇರದ ಕಾರಣ ವಿಚಾರಣೆಯನ್ನು ಮಾ. 21, 2014ಕ್ಕೆ ಮುಂದೂಡಲಾಯಿತು.
ಮೇ 19, 2005ರಂದು ತಾಲೂಕಿನ ರಾಜಾಪುರ ಹತ್ತಿರದ ಸಿದ್ದಪ್ಪನವರ ಜಮೀನು ಪ್ರದೇಶದಲ್ಲಿ ಅಕ್ರಮವಾಗಿ 75 ಟನ್ ಅದಿರನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಗಣಿ ಇಲಾಖೆ ಬಳ್ಳಾರಿಯ ಅಧಿಕಾರಿ ಸಿ. ಹನುಮಂತಪ್ಪ ಪರಿಶೀಲನೆ ಮಾಡಿದಾಗ ರಾಜಧನವಿಲ್ಲದೇ ಅಕ್ರಮವಾಗಿ ಅದಿರು ಸಾಗಿಸುತ್ತಿದ್ದುದು ಕಂಡು ಬಂದು ಸ್ವಸ್ತಿಕ್ ನಾಗರಾಜ್, ಚಕ್ರಪಾಣಿ, ಸಿದ್ದಪ್ಪ, ಉಮೇಶ್ ಹಾಗೂ ರಫೀಕ್ ಅವರ ವಿರುದ್ಧ (ಎಂಎಂಆರ್ಡಿ ಕಾಯ್ದೆ ಅಡಿ) ದೂರು ದಾಖಲಿಸಿದರು. ಪ್ರಕರಣಕ್ಕೆ ಕುರಿತಾಗಿ ಡಿ. 9, 2005ರಂದು ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಇತ್ತೀಚೆಗೆ ಅಕ್ರಮ ಅದಿರು ವ್ಯಾಪಾರದ ಆರೋಪದ ಹಿನ್ನೆಲೆಯಲ್ಲಿ ಬಂಧನದಲ್ಲಿರುವ ಸ್ವಸ್ತಿಕ್ ನಾಗರಾಜ್ ಅವರನ್ನು ಕರೆತರಲು ನ್ಯಾಯಾಲಯವು ಬಾಡಿ ವಾರೆಂಟ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪರಪ್ಪನ ಅಗ್ರಹಾರದಿಂದ ಇಂದು ಸಂಡೂರು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement