ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರು. 50 ಲಕ್ಷ ವೆಚ್ಚದಲ್ಲಿ ಭಗೀರಥ ಮಹರ್ಷಿ ಭವನ

Vishwanath S
Updated On : 24 Feb 2014, 11:11 am

ಹಗರಿಬೊಮ್ಮನಹಳ್ಳಿ: ರು. 50 ಲಕ್ಷ ವೆಚ್ಚದಲ್ಲಿ ಭಗೀರಥ ಮಹರ್ಷಿ ಹೆಸರಿನಲ್ಲಿ ಆಧುನಿಕ ಶೈಲಿಯಲ್ಲಿ ಸಮುದಾಯ ಭವನ ನಿರ್ಮಿಸಿಕೊಡುವ ಮೂಲಕ ಹಿಂದುಳಿದಿರುವ ಉಪ್ಪಾರ ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಶಾಸಕ ಎಸ್. ಭೀಮಾನಾಯ್ಕ ಭರವಸೆ ನೀಡಿದರು.
ಭಾನುವಾರ ಮಧ್ಯಾಹ್ನ ಪಟ್ಟಣದ ಚಿಂತ್ರಪಳ್ಳಿ ರಸ್ತೆಯಲ್ಲಿನ ಉಪ್ಪಾರ ಸಮಾಜದ ನಿವೇಶನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಉಪ್ಪಾರ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಸಮಾಜಕ್ಕೆ ನಿವೇಶನ ನೀಡಲಾಗಿದ್ದು, ಈ ನಿವೇಶನದಲ್ಲಿಯೆ ಭಗೀರಥ ಮಹರ್ಷಿಯ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು. ಈ ಸಂಬಂಧ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ, ಅದಷ್ಟು ಬೇಗ ಕ್ರಿಯಾಯೋಜನೆ ತಯಾರಿಸಲು ತಿಳಿಸುತ್ತೇನೆ ಎಂದರು.
ಕಠಿಣ ಪರಿಸ್ಥಿತಿಯಲ್ಲಿ ಬದುಕು ಕಟ್ಟಿಕೊಂಡು ಜೀವಿಸುತ್ತಿರುವ ಉಪ್ಪಾರರು ಶ್ರಮಜೀವಿಗಳು. ಆದರೆ ಸರ್ಕಾರದ ಸೌಲಭ್ಯಗಳಿಂದ ಸಂಪೂರ್ಣ ವಂಚಿತರಾಗಿದ್ದಾರೆ. ಮುಖ್ಯವಾಗಿ ಈ ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕಾಗಿದೆ. ಮುಂದಿನ ದಿನಗಳಲ್ಲಿ ಆ ಕಡೆ ಗಮನಹರಿಸಿ,  ಕೇಂದ್ರ-ರಾಜ್ಯ ಸರ್ಕಾರಗಳಿಂದ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಉಪ್ಪಾರ ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಸಮಾಜದ ತಾಲೂಕಾಧ್ಯಕ್ಷ ಜಿ. ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಅರಸಿಕೇರಿ ಹನುಮಂತಪ್ಪ, ಜಿಪಂ ಸದಸ್ಯ ರೋಗಾಣಿ ಹುಲುಗಪ್ಪ, ಚಿಂತ್ರಪಳ್ಳಿ ಗ್ರಾಪಂ ಅಧ್ಯಕ್ಷ ಎಂ. ಆನಂದ್, ಸದಸ್ಯರಾದ ಬಂಡಿಹಳ್ಳಿ ರಾಜಪ್ಪ, ಸಂಪತ್ಕುಮಾರ್ ನಾಯ್ಕ, ಸಮಾಜದ ಕಾರ್ಯದರ್ಶಿ ಹಂಪಾಪಟ್ಟಣ ಈಶಪ್ಪ, ಉಪಾಧ್ಯಕ್ಷ ಬಂಡಿಹಳ್ಳಿ ಪ್ರಕಾಶ, ಮುಖಂಡರಾದ ಗರಗದ ಪ್ರಕಾಶ, ಅಶೋಕ, ಬಂಗಾರಿ ಗಾಳಿರಾಜ, ಹಂಚಿನಮನಿ ಹನುಮಂತಪ್ಪ, ಹೂ ಮಂಜುನಾಥ, ಕೊಟ್ರೇಶ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement