ಜಿಎಸ್ಎಸ್ ವಿಶಿಷ್ಟ ಕವಿ: ಬೇವಿನಕಟ್ಟಿ
ಹೊಸಪೇಟೆ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ದಲಿತ, ಬಂಡಾಯ ಸಂವೇದನೆಯಲ್ಲಿ ಬರವಣಿಗೆ ನಡೆಸಿದ ವಿಶಿಷ್ಟ ಕವಿ ಎಂದು ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ. ಮಂಜುನಾಥ ಬೇವಿನಕಟ್ಟಿ ಹೇಳಿದರು. ನಗರದ ಸಮುದಾಯ ಸಾಂಸ್ಕೃತಿಕ ಸಂಘಟನೆ ಆಯೋಜಿಸಿದ್ದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಹಾಗೂ ಗಾಯಕ ಯಶವಂತ ಹಳಿಬಂಡಿ ನೆನಪಿನಾರ್ಥ ಕಾವ್ಯವಾಚನ ಮತ್ತು ಭಾವಸಂಜೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಹಿರಿಯ ಕಲಾವಿದ ಎ. ಕಾಳಪ್ಪ, ಜಿಲ್ಲಾ ಸಂಚಾಲಕ ಎಚ್. ಚನ್ನಬಸಪ್ಪ ಮಾತನಾಡಿದರು. ನಮ್ಮ ಭಾರತ ವಿರುದ್ಧ ನಮೋ ಭಾರತ ಎನ್ನುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸರ್ಕಾರಿ ಕಾಲೇಜ್ ಪ್ರಾಚಾರ್ಯ ಡಾ.ಕೆ. ಪನ್ನಂಗಧರ ವಹಿಸಿ ಮಾತನಾಡಿದರು. ಸಂಘಟನೆಯ ಎ. ಕರುಣಾನಿಧಿ, ಥಿಯೋಸಾಫಿಕಲ್ ಮಹಿಳಾ ಕಾಲೇಜ್ ಉಪನ್ಯಾಸಕ ಕಿಚಡಿ ಚನ್ನಪ್ಪ, ಸಮುದಾಯದ ಅಧ್ಯಕ್ಷ ಕೆ. ಚಂದ್ರಪ್ಪ, ಸ್ಫೂರ್ತಿ ವೇದಿಕೆಯ ಬಿ. ತಾಯಪ್ಪ ನಾಯಕ, ಉಪನ್ಯಾಸಕ ಎಚ್.ಎಂ. ನಿರಂಜನ, ಉಪನ್ಯಾಸಕಿ ನಾಗಪುಷ್ಪಲತಾ ಮಾತನಾಡಿದರು. ಅಭಿಷೇಕ, ತ್ರಿಲೋಕ, ನಾಗರಾಜ ಪತ್ತಾರ್, ಗೌತಮಿ, ಸುಜಾತಾ, ಕಾರ್ಯಕ್ರಮ ನಡೆಸಿಕೊಟ್ಟರು. ಎಚ್.ಎಂ. ಜಂಬುನಾಥ ಸ್ವಾಗತಿಸಿದರು. ಉಮಾಮಹೇಶ್ವರ ವಂದಿಸಿದರು. ಮಧುರಚನ್ನ ಶಾಸ್ತ್ರಿ ನಿರೂಪಿಸಿದರು.