ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಮವಸ್ತ್ರ ಹಿಂಪಡೆಯಲು ಮಾಜಿ ಸೈನಿಕರ ಒತ್ತಾಯ

Vishwanath S
Updated On : 25 Feb 2014, 11:10 am

ಹೂವಿನಹಡಗಲಿ: ಜಿಲ್ಲೆಯ ಪೌರ ಕಾರ್ಮಿಕರಿಗೆ ದೇಶ ಕಾಯುವ ಸೈನಿಕರು ಯುದ್ಧ ಮತ್ತು ಕಾರ್ಯಾಚರಣೆ ಸಂದರ್ಭದಲ್ಲಿ ಬಳಕೆ ಮಾಡುವ ಸಮವಸ್ತ್ರವನ್ನು ನೀಡಿರುವುದು ಸರಿಯಲ್ಲ. ಈ ಕೂಡಲೆ ಈ ಸಮವಸ್ತ್ರವನ್ನು ಹಿಂದಕ್ಕೆ ಪಡೆಯಬೇಕೆಂದು ತಾಲೂಕು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.
ಪಟ್ಟಣದಲ್ಲಿ ಸಂಘದ ಇಮಾಂಸಾಬ್ ಮಾತನಾಡಿ, ಪುರಸಭೆ ಸ್ವಚ್ಛತಾ ಸಿಬ್ಬಂದಿಗೆ ಬೇರೊಂದು ಸಮವಸ್ತ್ರ ನೀಡಬೇಕು. ಸೈನ್ಯ ಸೇರುವ ತವಕದಲ್ಲಿರುವ ಯುವಕರು ಪೌರ ಕಾರ್ಮಿಕ ಸಿಬ್ಬಂದಿ ಸೈನ್ಯದ ಸಮವಸ್ತ್ರ ಹಾಕಿಕೊಂಡು ಕಸ ಗೂಡಿಸುವ ಚಿತ್ರಣ ಆ ಯುವಕರ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತದೆ. ಇದರಿಂದ ಸೈನಿಕರಿಗೆ ಅಗೌರವ ಸೂಚಿಸಿದಂತಾಗುತ್ತದೆ ಎಂದರು.
ಸೈನಿಕರು ಕೂಡ ಬೇರೆ ಸಂದರ್ಭಗಳಲ್ಲಿ ಸೈನಿಕ ಸಮವಸ್ತ್ರವನ್ನು ಬಳಕೆ ಮಾಡುವಂತಿಲ್ಲ. ಈ ಹಿಂದೆ ಸೈನಿಕರ ಸಮವಸ್ತ್ರವನ್ನು ಬಳಕೆ ಮಾಡಿಕೊಂಡು ದೇಶದ ಗಡಿಯೊಳಗೆ ಭಯೋತ್ಪಾದಕರು ನುಗ್ಗಿ ದೇಶದ್ರೋಹದ ಕೆಲಸ ಮಾಡುತ್ತಾರೆಂದು ಈ ಸೈನಿಕ ಸಮವಸ್ತ್ರವನ್ನು ಯಾರು ಬಳಸದಂತೆ ನಿಷೇಧ ಇತ್ತು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ತಾಲೂಕು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘವು ಮನವಿಪತ್ರ ನೀಡಿ ಒತ್ತಾಯಿಸುತ್ತೇವೆಂದು ಹೇಳಿದರು. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ ಅವರು ತಮಗೆ ಬರುವ ಗೌರವಧನ ತೆಗೆದುಕೊಳ್ಳದೆ ಅವರ ಅವಿತರ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಮಾಜಿ ಸೈನಿಕರಿಗೆ ಬಜೆಟ್ನಲ್ಲಿ 1 ಶ್ರೇಣಿ, 1 ಪಿಂಚಣಿಯನ್ನು ದೇಶದ ಎಲ್ಲ ಮಾಜಿ ಮಾಜಿ ಸೈನಿಕರಿಗೆ ನೀಡಿರುವುದನ್ನು ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಜಗನ್ನಾಥ, ಎಚ್.ಎಸ್. ಮಲ್ಲೇಶ, ಉಮಾಕಾಂತ, ಸಿ. ದೇವೇಂದ್ರಪ್ಪ, ಅನ್ವರ್ಬಾಷಾ, ಬಿ.ಪಿ. ಕಲಾಲ್, ಬಿ.ಜಿ. ಪಾಟೀಲ್, ಕೃಷ್ಣಪ್ಪ, ಎ. ದೊಡ್ಡಪ್ಪ ಸೇರಿದಂತೆ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement