ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹಗರಿಬೊಮ್ಮನಹಳ್ಳಿ ಗ್ರಾಪಂಗೆ ಕನಕಪ್ಪ ಅವಿರೋಧ ಆಯ್ಕೆ

Vishwanath S
Updated On : 25 Feb 2014, 11:10 am

ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಯ 2ನೇ ವಾರ್ಡ್ನಿಂದ ಹಳೆ ಹಗರಿಬೊಮ್ಮನಹಳ್ಳಿ ಗೊಲ್ಲರ ಓಣಿಯ ವ್ಯಾಸನಕೇರಿ ಕನಕಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕನಕಪ್ಪ ಹೊರತುಪಡಿಸಿ ನಾಮಪತ್ರ ಸಲ್ಲಿಸಿದ್ದ ಉಳಿದ ಐವರು ನಾಮಪತ್ರ ವಾಪಾಸ್ ಪಡೆದು ಕನಕಪ್ಪ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದರು. ಈ ಹಿಂದೆ ಈ ವಾರ್ಡ್ನಿಂದ ಆಯ್ಕೆಗೊಂಡಿದ್ದ ಹಾಲ್ದಾಳ ವಿಜಯಕುಮಾರ ಅವರ ರಾಜಿನಾಮೆಯಿಂದಾಗಿ ಈ ಸ್ಥಾನ ತೆರವುಗೊಂಡಿತ್ತು. ಹೀಗಾಗಿ ಜಿಲ್ಲಾಡಳಿತ ಮಾರ್ಚ್ 2ರಂದು ಈ ಸ್ಥಾನಕ್ಕೆ ಚುನಾವಣೆ ಘೋಷಣೆ ಮಾಡಿತ್ತು. ಆಯ್ಕೆ ಬಯಸಿ ಕನಕಪ್ಪ ಸೇರಿ 6 ಜನ ನಾಮಪತ್ರ ಸಲ್ಲಿಸಿದ್ದರು.
ಗ್ರಾಮದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಒಂದೆಡೆ ಸೇರಿ ಒಮ್ಮತದ  ಆಯ್ಕೆಗೆ ಒಲವು ವ್ಯಕ್ತಪಡಿಸಿದ ಮೇಲೆ ಕನಕಪ್ಪ ಹೊರತುಪಡಿಸಿದಂತೆ ಉಳಿದವರು ತಮ್ಮ ನಾಮಪತ್ರ ಹಿಂಪಡೆದರು. ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಎಂ. ಚೋಳರಾಜ, ಹುಡೇದ್ ಗುರುಬಸವರಾಜ, ಗ್ರಾಪಂ ಮಾಜಿ ಉಪಾಧ್ಯಕ್ಷ ಸೋಮನಗೌಡ ಪಾಟೀಲ್, ಸದಸ್ಯ ತ್ಯಾವಣಿಗಿ ಕೊಟ್ರೇಶ, ನಾರಾಯಣಪ್ಪ, ವಿ. ಹನುಮಂತಪ್ಪ,  ಮುಖಂಡ ಉತ್ತಂಗಿ ವೀರಣ್ಣ, ಚಿತ್ತವಾಡಿಗಿ ಪ್ರಕಾಶ, ತಳವಾರ ರಾಘವೇಂದ್ರ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement