ರೈಲಿಗೆ ಸಿಲುಕಿ ಮಹಿಳೆ ಸಾವು: ಪ್ರಕರಣ ದಾಖಲು
ಹೊಸಪೇಟೆ: ಅಪರಿತ ಮಹಿಳೆಯೊಬ್ಬಳು ರೈಲಿಗೆ ಸಿಲುಕಿ ಸ್ಥಳದಲ್ಲೇ ಮೃತಗೊಂಡಿರುವ ಘಟನೆ ಹೊಸಪೇಟೆ ನಗರ ಹಾಗೂ ಮುನಿರಾಬಾದ್ ಮಧ್ಯ ಬುಧವಾರ ಬೆಳಗ್ಗೆ ನಡೆದಿದೆ. ಅಂದಾಜು 35-40 ವರ್ಷದ ಅಪರಿಚ ಮಹಿಳೆಯು ರೈಲು ಹಳಿ ದಾಟುವಾಗ ಆಕಸ್ಮಿಕವಾಗಿ ಯಾವುದೋ ರೈಲು ಅಥವಾ ಗೂಡ್ಸ್ ರೈಲು ಡಿಕ್ಕಿ ಹೊಡೆದುಕೊಂಡು ಹೋಗಿರುವುದರಿಂದ ಮಹಿಳೆಯ ಬಲಗೈ ಮುರಿದಿದ್ದು, ತೆಲೆಗೆ ಪೆಟ್ಟುಬಿದ್ದು ಸ್ಥಳದಲ್ಲೇ ಸಾವಣ್ಣಪ್ಪಿದ್ದಾಳೆ. ಮೃತ ಮಹಿಳೆ ಕುರಿತು ವಿಳಾಸ ಪತ್ತೆಯಾಗಿಲ್ಲ. ಮಹಿಳೆ ನೀಲಿ ಬಣ್ಣದ ರವಿಕೆ, ಕೆಂಪು ಮತ್ತು ಹಸಿರು ಮಿಶ್ರಿತ ಸೀರೆ ಮತ್ತು ಹಸಿರು ಬಣ್ಣದ ಲಂಗ ತೊಟ್ಟಿದ್ದಾಳೆ ಎಂದು ರೇಲ್ವೆ ಪೊಲೀಸರು ತಿಳಿಸಿದ್ದಾರೆ. ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.