ಇಂದು ಪುಸ್ತಕ ವಿತರಣೆ
ಬಳ್ಳಾರಿ: ನಗರದ ಸೆಂಚ್ಯುನರಿ ಸಭಾಂಗಣದಲ್ಲಿ ಮಾ. 1ರಂದು ಬೆಳಗ್ಗೆ 11ಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಜರುಗಲಿದೆ. ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ಕಾರ್ಯಕ್ರಮ ಉದ್ಘಾಟಿಸುವರು. ಡಿಡಿಪಿಐ ವೀರಣ್ಣ ಜತ್ತಿ ಪುಸ್ತಕ ವಿತರಿಸುವರು. ವಿಶೇಷ ಆಹ್ವಾನಿತರಾಗಿ ಬಿಎಸ್‌ಆರ್ ಇನ್‌ಫೊಟೆಕ್‌ನ ಬಿ. ಶ್ರೀನಿವಾಸರಾವ್ ಮತ್ತು ಅತಿಥಿಗಳಾಗಿ ಬಿಇಒ ಬಿ.ಎಂ. ವೃಷಭೇಂದ್ರಯ್ಯ, ಅಶೋಕ್‌ಕುಮಾರ್ ಸಿಂದಿಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಎಂ.ಟಿ. ಮಲ್ಲೇಶ್, ಕಾಂಗ್ರೆಸ್ ಮುಖಂಡ ಅಸುಂಡಿ ಹೊನ್ನೂರಪ್ಪ ಹಾಗೂ ಇತರರು ಪಾಲ್ಗೊಳ್ಳುವರು ಎಂದು ಸಿದ್ದರಾಮಗೌಡ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ತೈಲಾಭಿಷೇಕ
ಬಳ್ಳಾರಿ: ನಗರದ ಸತ್ಯನಾರಾಯಣ ಪೇಟೆಯಲ್ಲಿರುವ ಎಳ್ಳುಗಂಟು ಶ್ರೀ ಶನಿ ಮಹಾತ್ಮ ದೇವಸ್ಥಾನದಲ್ಲಿ ಅಮಾವಾಸ್ಯೆ ನಿಮಿತ್ತ ಮಾ. 1ರಂದು ಶನಿವಾರ ಶ್ರೀ ಶನಿದೇವರಿಗೆ ಭಕ್ತಾಧಿಗಳಿಂದ ತೈಲಾಭಿಷೇಕ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 4ರಿಂದ ರಾತ್ರಿ 8ರ ವರೆಗೆ ತೈಲಾಭಿಷೇಕ ನಡೆಯಲಿದ್ದು, ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಧರ್ಮಕರ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಇಂದು ವಾರ್ಷಿಕೋತ್ಸವ
ಬಳ್ಳಾರಿ: ಸ್ವರ ಸ್ಪಂದನಾ ಸಂಗೀತ ಸಂಸ್ಥೆಯ 4ನೇ ವರ್ಷದ ವಾರ್ಷಿಕ ಕಾರ್ಯಕ್ರಮವು ನಗರದ ರಾಘವ ಕಲಾಮಂದಿರದಲ್ಲಿ ಮಾ. 1ರಂದು ಸಂಜೆ 5.30ಕ್ಕೆ ನಡೆಯಲಿದೆ. ವಾರ್ಷಿಕೋತ್ಸವದ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸ್ಥಳೀಯ ಪ್ರಾಯೋಜಿತ ಕಾರ್ಯಕ್ರಮದಡಿ ಪಿ. ಕಾಳಿಂಗರಾವ್ ಸ್ಮರಣಾರ್ಥ ಗೀತಗಾಯನ ಕಾರ್ಯಕ್ರಮ ಜರುಗಲಿದ್ದು, ಧಾರವಾಡದ ಗಾಯಕ ಡಾ. ಮೃತ್ಯುಂಜಯ ಶೆಟ್ಟರ್ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಬಿ. ನಾಗರಾಜ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಂಗೀತ ಶಿಕ್ಷಕಿ ವಿಜಯ ಕಿಶೋರಿ, ಪತ್ರಕರ್ತ ಕಾಡ್ಲೂರ್ ಮಧುಸೂದನ, ಕಪ್ಪಗಲ್ ರಸೂಲ್‌ಸಾಬ್ ಪಾಲ್ಗೊಳ್ಳುವರು. ಸ್ವರ ಸ್ಪಂದನಾ ಸಂಗೀತ ಸಂಸ್ಥೆ ವಿದ್ಯಾರ್ಥಿಗಳಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ನಾಳೆ ಉಪ್ಪಾರ ಸಮಾವೇಶ
ಹೊಸಪೇಟೆ: ಕರ್ನಾಟಕ ರಾಜ್ಯ ಉಪ್ಪಾರ ಸಂಘದಿಂದ ರಾಜ್ಯಮಟ್ಟದ ಉಪ್ಪಾರ ಸಮಾಜದ ಸಮಾವೇಶ ಬೆಂಗಳೂರಿನ ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಮೈದಾನ ನೈಸ್ ರೋಡ್, ಮಾಧವಾರದಲ್ಲಿ ಮಾ. 2ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮಾವೇಶ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶ ಉದ್ಘಾಟಿಸುವರು. ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷ ಸಿ. ಪುಟ್ಟರಂಗ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಕೇಂದ್ರ ಮತ್ತು ರಾಜ್ಯದ ಸಚಿವರು, ವಿವಿಧ ಪಕ್ಷಗಳ ಮುಖಂಡರು, ಗಣ್ಯರು ಭಾಗವಹಿಸುವರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ವೆಂಕೋಬ ಸೇರಿದಂತೆ ಇತರೆ ಮುಖಂಡರ ಉಪಸ್ಥಿತಿಯಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಸಮಾಜದ ಎಲ್ಲಾ ಬಂಧುಗಳು ಸಮಾವೇಶಕ್ಕೆ ಆಗಮಿಸಲು ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಯು. ಅಶ್ವಥಪ್ಪ, ಕಾರ್ಯದರ್ಶಿ ಯು. ವೆಂಕಟೇಶ್ ಕೋರಿದ್ದಾರೆ.