ಇಂದಿನಿಂದ ರಾಷ್ಟ್ರೀಯ ವಿಚಾರ ಸಂಕಿರಣ
ಬಳ್ಳಾರಿ: ಮೈಸೂರಿನ ದಕ್ಷಿಣ ಪ್ರಾದೇಶಿಕ ಭಾಷಾ ಕೇಂದ್ರ, ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಸಹಯೋಗದಲ್ಲಿ ಜ. 3, 4ರಂದು ರಾಷ್ಟ್ರೀಯ ವಿಚಾರ ಸಂಕಿರಣವನ್ನು ವಿವಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಎರಡೂ ದಿನಗಳೂ ಸೇರಿ 5 ಗೋಷ್ಠಿಗಳನ್ನು ನಡೆಸಲಾಗುವುದು.
ಕಾರ್ಯಕ್ರಮವನ್ನು ಜ. 3ರ ಬೆಳಗ್ಗೆ 10ಕ್ಕೆ ಮೈಸೂರಿನ ಖ್ಯಾತ ಚಿಂತಕ ಪ್ರೊ. ಕೆ.ಎಸ್. ಭಗವಾನ್ ಉದ್ಘಾಟಿಸಲಿದ್ದಾರೆ. ವಿವಿ ಕುಲಪತಿ ಪ್ರೊ. ಮಂಜಪ್ಪ ಡಿ. ಹೊಸಮನೆ ಅಧ್ಯಕ್ಷತೆವಹಿಸಲಿದ್ದು, ಕುಲಸಚಿವ ಪ್ರೊ. ಕೆ. ವಿಜಯಕುಮಾರ್, ಮೌಲ್ಯಮಾಪನ ಕುಲಸಚಿವ ಪ್ರೊ. ಎಲ್.ಆರ್. ನಾಯಕ್, ಸಾಹಿತಿ ಡಾ. ಕುಂ. ವೀರಭದ್ರಪ್ಪ, ದ.ಪ್ರಾ.ಭಾ.ಕೇ. ಪ್ರಾಚಾರ್ಯ ಡಾ. ಜಿ. ಪ್ರಭಾಕರ್ ಆಗಮಿಸಲಿದ್ದಾರೆ.
ಮೊದಲನೇ ದಿನ 12ರಿಂದ 2 ಗಂಟೆಗೆ ಹಂಪಿ ವಿವಿಯ ಡಾ. ಡಿ. ಪಾಂಡುರಂಗ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಗೋಷ್ಠಿ 1(ದ್ವಿಭಾಷಿಕ ಪರಿಸರ)ರಲ್ಲಿ ಡಾ. ಕೆ. ಭಾಗ್ಯಲಕ್ಷ್ಮಿ ಅವರು ಕಲಿಕೆಯಲ್ಲಿ ದ್ವಿಭಾಷಿಕ ನೆಲೆ ಕುರಿತು, ಡಾ. ಪಿ. ಮಹಾದೇವಯ್ಯ ಉರ್ದು ಮತ್ತು ಕನ್ನಡ ಸಂಬಂಧ, ಡಾ. ಜಾಜಿ ದೇವೇಂದ್ರಪ್ಪ ತೆಲುಗು ಮತ್ತು ಕನ್ನಡ ಸಂಬಂಧ, ಡಾ. ಸಂತೋಷ ಪವಾರ್ ಅವರು ಮರಾಠಿ ಮತ್ತ ಕನ್ನಡ ಸಂಬಂಧ, ಲಂಬಾಣಿ ಭಾಷಿಗರ ಕಲಿಕೆ ತೊಡಕು ಕುರಿತು ಡಾ. ಸೋಮಕ್ಕ ಗೋಷ್ಠಿ ನಡೆಸಲಿದ್ದಾರೆ.
ಮಧ್ಯಾಹ್ನ 2.30 ರಿಂದ 5.30ರ ವರೆಗೂ ಪ್ರೊ. ಟಿ.ಆರ್. ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಗೋಷ್ಠಿ 2(ಸಾಂಸ್ಕೃತಿಕ ಮತ್ತು ರಾಜಕೀಯ ನೆಲೆ)ರಲ್ಲಿ ಡಾ. ಅಮರೇಶ್ ನುಗಡೋಣಿ ಅವರು ಹೈದ್ರಾಬಾದ್-ಕರ್ನಾಟಕ ಸಾಂಸ್ಕೃತಿಕ ಪರಿಸರ ಕುರಿತು, ಡಾ. ಅರುಣ್ ಜೋಳದ ಕೂಡ್ಲಿಗಿ ಅವರು ಕಲಿಕೆಯಲ್ಲಿ ಜಾನಪದದ ಬಳಕೆಯ ಸಾಧ್ಯತೆಗಳು, ಡಾ. ಚಂದ್ರಕಲಾ ಬಿದರಿ ಅವರು ಹೈ-ಕ ಗಡಿಭಾಗದ ಸಾಂಸ್ಕೃತಿಕ ಭಿನ್ನತೆ ಮತ್ತು ಮಹಿಳಾ ಕಲಿಕೆಯ ತೊಡಕುಗಳು ಕುರಿತು, ಡಾ. ಶ್ರೀನಿವಾಸ ಬೇಂದ್ರೆ ಅವರು ಹೈ-ಕ ಶೈಕ್ಷಣಿಕ ಸ್ಥಿತಿಗತಿ ಕುರಿತು ಸಂಶೋಧನೆ ಮತ್ತು ಅಧ್ಯಯನಗಳ ಪರಿಶೀಲನೆ ಕುರಿತು ಹಾಗೂ ಡಾ. ಗಿರೇಗೌಡ ಅವರು ದಲಿತ ಮಕ್ಕಳ ಕಲಿಕೆಯ ಸಾಂಸ್ಕೃತಿಕ ನೆಲೆಗಳು ಕುರಿತು ಗೋಷ್ಠಿ ನಡೆಸಲಿದ್ದಾರೆ.
2ನೇ ದಿನವಾದ ಜ. 4ರಂದು ಬೆಳಗ್ಗೆ 9.30ರಿಂದ 11.30ರ ವರೆಗೆ ಬಿ.ವಿ. ಅರಕೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಗೋಷ್ಠಿ 3 (ಪಾಠ ಬೋಧನೆಯ ಪ್ರಾಯೋಗಿಕ ನೆಲೆ- ಅನುಭವ ನಿರೂಪಣೆ)ರಲ್ಲಿ ಶ್ರೀ ಯೋಗಾನಂದ ಸ್ವಾಮಿ, ಡಾ. ಟಿ.ಎಂ. ಉಷಾರಾಣಿ, ಡಾ. ಸರ್ವಮಂಗಳ ಸಕ್ರಿ, ಬಸವರಾಜು.ಕೆ., ಪಿ. ನಾಗೇಂದ್ರಪ್ಪ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ 2 ಗಂಟೆವರೆಗೆ ಪ್ರೊ. ಮೃತ್ಯುಂಜಯ ರುಮಾಲೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಗೋಷ್ಠಿ 4 (ಕಲಿಕೆ ಮತ್ತು ಆರ್ಥಿಕ ನೆಲೆ)ರಲ್ಲಿ ಡಾ. ವಿ.ಬಿ. ತಾರಕೇಶ್ವರ ಅವರು ದಕ್ಷಿಣ ಭಾರತದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಭಾಷಾ ಕಲಿಕೆಯ ಅಧ್ಯಯನದ ನೆಲೆಗಳು, ಡಾ. ಬಿ.ಜಿ. ಕಲಾವತಿ ಅವರು ಆರ್ಥಿಕ ಹಿನ್ನೆಲೆಯಲ್ಲಿ ಶಾಲೆ ಬಿಟ್ಟ ಮಕ್ಕಳ ಕನ್ನಡ ಕಲಿಕೆ, ಹೃಷಿಕೇಶ ಬಹದ್ದೂರ್ ಅವರು ಕನ್ನಡ ಭಾಷಾ ಕಲಿಕೆ ಮಾಧ್ಯಮದ ಹೊಣೆಗಾರಿಕೆ, ಡಾ. ನಿಂಗಣ್ಣ ಹೈ-ಕ ತಮಿಳು ವಲಸಿಗರ ಕನ್ನಡ ಕಲಿಕಾ ಸಮಸ್ಯೆಗಳು ಕುರಿತು ಗೋಷ್ಠಿ ನಡೆಸಲಿದ್ದಾರೆ.
ಮಧ್ಯಾಹ್ನ 2.30 ರಿಂದ 4.30ರ ವರೆಗೆ ಶ್ರೀ ಕಿಕ್ಕೇರಿ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಗೋಷ್ಠಿ 5(ಬುಡಕಟ್ಟು ಮಕ್ಕಳ ಭಾಷಾ ಕಲಿಕೆಯ ತೊಡಕುಗಳು)ರಲ್ಲಿ ಡಾ. ಎನ್. ಶಾಂತನಾಯಕ್ ಬುಡಕಟ್ಟು ಭಾಷೆಗಳು- ಕನ್ನಡ ಕಲಿಕೆ ತೊಡಕು ಕುರಿತು, ಎಂ. ಸೋಮಶೇಖರ್ ಅವರು ಬುಡಕಟ್ಟು ಜನರ ವಲಸೆ ಮತ್ತು ಕಲಿಕೆಯ ಸಮಸ್ಯೆಗಳು ಕುರಿತು, ಡಾ. ಜೆ. ಕುಮಾರ್ ಅವರಿಂದ ಅರಣ್ಯ ಶಿಕಾರಿ ಮಕ್ಕಳ ಕನ್ನಡ ಕಲಿಕೆಯ ಸಮಸ್ಯೆಗಳು ಕುರಿತು ಗೋಷ್ಠಿ ನಡೆಯಲಿದೆ.
ಸಂಜೆ 5 ರಿಂದ 6 ಗಂಟೆವರೆಗೆ ಸಮಾರೋಪ ನಡೆಯಲಿದ್ದು, ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯ ಕುಲಸಚಿವ ಪ್ರೊ. ರಂಗರಾಜ ವನದುರ್ಗ ಸಮಾರೋಪ ಭಾಷಣ ಮಾಡಲಿದ್ದಾರೆ. ಕರ್ನಾಟಕ ಜಾನಪದ ವಿವಿಯ ಕುಲಸಚಿವ ಪ್ರೊ. ಡಿ.ಬಿ. ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ. ಅವಧೇಶ್ ಕುಮಾರ್ ಮಿಶ್ರ, ದ.ಪ್ರಾ.ಭಾ.ಕೇ.ದ ಪ್ರಾಚಾರ್ಯ ಡಾ. ಜಿ. ಪ್ರಭಾಕರ್, ಸಂಯೋಜಕ ಡಾ. ಸಣ್ಣಪಾಪಯ್ಯ, ವಿ.ಕೃ.ವಿ. ಸ್ಥಳೀಯ ಸಂಯೋಜಕ ಡಾ. ಎನ್. ಶಾಂತ ನಾಯಕ್ ಪಾಲ್ಗೊಳ್ಳಲಿದ್ದಾರೆ.