ಪ್ರಚೋದನಕಾರಿ ಸಂದೇಶ: ಉದ್ರಿಕ್ತ ವಾತಾವರಣ
ಹೊಸಪೇಟೆ: ಕೋಮುಭಾವನೆ ಕೆರಳಿಸುವ ಸಂದೇಶವೊಂದನ್ನು ಫೇಸ್ಬುಕ್ನಲ್ಲಿ ಹರಿಯ ಬಿಟ್ಟಿದ್ದಕ್ಕೆ ಒಂದು ಕೋಮುವಿನ ಜನರು ಉದ್ರಿಕ್ತರಾಗಿ ನಗರದ ಬೇಕರಿಯೊಂದರ ಮೇಲೆ ದಾಳಿ ನಡೆಸಿದರು. ಅಲ್ಲದೆ, ನಗರ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ನಗರ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಫೇಸ್ಬುಕ್ನಲ್ಲಿ ಸಂದೇಶ ರವಾನಿಸಿದ ಯುವಕನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸುವ ಭರವಸೆ ನೀಡಿದಾಗ ಪರಿಸ್ಥಿತಿ ಶಾಂತವಾಯಿತು.
ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುವ ಸಂಭವವಿರುವುದರಿಂದ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.