ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸ್ಮಯೋರ್ ಗಣಿ ಕಂಪನಿ ಸ್ಥಗಿತ

Mainashree
Updated On : 3 Jan 2014, 12:26 pm

ಬಳ್ಳಾರಿ: ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿದ್ದ ಪರವಾನಗಿಯ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಸಂಡೂರಿನಲ್ಲಿ ಮಾಜಿ ಸಚಿವ ಘೋರ್ಪಡೆಗೆ ಸೇರಿದ 'ಸ್ಮಯೋರ್‌' ಕಂಪನಿಯು ಜ.1ರಿಂದಲೇ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ. ಪರವಾನಗಿ ಮುಗಿದಿರುವ ಹಿನ್ನೆಲೆಯಲ್ಲಿ ಕಂಪನಿಗೆ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ಗಣಿ ವಲಯದಲ್ಲಿ ಅತ್ಯಂತ ದೊಡ್ಡ ಕಂಪನಿಗಳಲ್ಲಿ ಒಂದಾದ 'ಸಂಡೂರು ಮ್ಯಾಂಗನೀಸ್ ಆ್ಯಂಡ್ ಐರನ್ ಓರ್ ಪ್ರೈವೇಟ್ ಲಿಮಿಟೆಡ್‌'(ಸ್ಮಯೋರ್) ಕಂಪನಿಯು 1994ರಿಂದ 2013 ಡಿ.31ರ ವರೆಗೆ ಗಣಿ ಗುತ್ತಿಗೆ ಪರವಾನಗಿ ಪಡೆದಿದ್ದು, ಪರವಾನಗಿ ನವೀಕರಣ ಮಾಡಿಸಿಕೊಳ್ಳದ ಹಿನ್ನೆಲೆಯಲ್ಲಿ 'ಎ' ಕೆಟಗರಿಯಲ್ಲಿ ಬರುವ ಸ್ಮಯೋರ್ ಕಂಪನಿಗಳ ಎರಡು ಗಣಿ ಗುತ್ತಿಗೆ ಕಂಪನಿಗಳ ಕಾರ್ಯವು ಡಿ. 31ರಿಂದ ಸ್ಥಗಿತಗೊಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement