ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸ್ಮಯೋರ್ ಗಣಿ ಕಂಪನಿ ಸ್ಥಗಿತ

Lingaraj Badiger
Updated On : 3 Jan 2014, 12:37 pm

ಬಳ್ಳಾರಿ: ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪರವಾನಗಿ ದಿನಾಂಕ ಮುಗಿದಿರುವ ಹಿನ್ನೆಲೆಯಲ್ಲಿ ಸಂಡೂರಿನಲ್ಲಿ ಮಾಜಿ ಸಚಿವ ಘೋರ್ಪಡೆಗೆ ಸೇರಿದ ಸ್ಮಯೋರ್ ಕಂಪನಿಯು ಜ. 1ರಿಂದಲೇ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ. ಪರವಾನಗಿ ಮುಗಿದಿರುವ ಹಿನ್ನೆಲೆಯಲ್ಲಿ ಕಂಪನಿಗೆ ಇಲಾಖೆ ನೋಟಿಸ್ ಜಾರಿ ಮಾಡಿತ್ತು.
ಗಣಿ ವಲಯದಲ್ಲಿ ಅತ್ಯಂತ ದೊಡ್ಡ ಕಂಪನಿಗಳಲ್ಲಿ ಒಂದಾದ ಸಂಡೂರು ಮ್ಯಾಂಗನೀಸ್ ಆ್ಯಂಡ್ ಐರನ್ ಓರ್ ಪ್ರೈವೇಟ್ ಲಿಮಿಟೆಡ್ (ಸ್ಮಯೋರ್) ಕಂಪನಿಯು 1994ರಿಂದ 2013 ಡಿ. 31ರ ವರೆಗೆ ಗಣಿ ಗುತ್ತಿಗೆ ಪರವಾನಗಿ ಪಡೆದಿದ್ದು, ಪರವಾನಗಿ ನವೀಕರಣ ಮಾಡಿಸಿಕೊಳ್ಳದ ಹಿನ್ನೆಲೆಯಲ್ಲಿ ಎ ಕೆಟಗರಿಯಲ್ಲಿ ಬರುವ ಸ್ಮಯೋರ್ ಕಂಪನಿಗಳ ಎರಡು ಗಣಿ ಗುತ್ತಿಗೆ ಕಂಪನಿಗಳ ಕಾರ್ಯವು ಡಿ. 31ರಿಂದ ಸ್ಥಗಿತಗೊಳಿಸಲಾಗಿದೆ.
ಸ್ಮಯೋರ್ ಕಂಪನಿಯು ಎರಡು ಗಣಿ ಗುತ್ತಿಗೆ ಪ್ರದೇಶವನ್ನು ಹೊಂದಿದ್ದು, ಅದರಲ್ಲಿ ಗಣಿ ಗುತ್ತಿಗೆ ಸಂಖ್ಯೆ 2580ರಲ್ಲಿ 1615 ಹೆಕ್ಟೇರ್ ಪ್ರದೇಶದಲ್ಲಿ ಗಣಿ ಗುತ್ತಿಗೆ, ಗಣಿ ಗುತ್ತಿಗೆ ಸಂಖ್ಯೆ 2581ರಲ್ಲಿ 142 ಹೆಕ್ಟೇರ್ ಪ್ರದೇಶದ ಗಣಿ ಗುತ್ತಿಗೆ ಪ್ರದೇಶವನ್ನು ಹೊಂದಿದೆ. ಡಿ. 31ರಂದು ಗಣಿ ಗುತ್ತಿಗೆ ರದ್ದಾಗುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತಾಗಿ ಅರಣ್ಯ ಇಲಾಖೆಯಿಂದ ಡಿ. 30ರಂದು ಸ್ಮಯೋರ್ ಕಂಪನಿಗೆ ನೋಟಿಸ್ ನೀಡಲಾಗಿತ್ತು.
ಕಂಪನಿಯು ಡಿ. 31ರಂದು ಉತ್ತರ ಕೊಟ್ಟಿದ್ದು, ಗಣಿ ಗುತ್ತಿಗೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದು, ನವೀಕರಣ ಮಾಡಿಸುವವರೆಗೆ ಮುಂದುವರಿಸಲಾಗುತ್ತದೆ ಎಂದು ನವೀಕರಣಕ್ಕೆ ಸಲ್ಲಿಸುವ ಅರ್ಜಿಯಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಡೆಸಲಾಗುತ್ತಿದೆ ಎಂದು ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ನಿಯಮಗಳ ಅಡಿಯಲ್ಲಿ ಆ ರೀತಿಯಾಗಿ ಪರವಾನಗಿ ಮುಗಿದರೂ, ಮುಂದುವರಿಸಿಕೊಂಡು ಹೋಗಲು ಬರುವುದಿಲ್ಲ.
ಎ ಕೆಟಗರಿಯಲ್ಲಿ ಬರುವ ಸ್ಮಯೋರ್ ಕಂಪನಿಯು ಟ್ರಸ್ಟಿ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಮೂಲತಃ ಮಾಜಿ ಸಚಿವ ಎಂ.ವೈ. ಘೋರ್ಪಡೆ ಅವರಿಗೆ ಸೇರಿದಂತೆ ಕಂಪನಿ ಎಂದು ಹೇಳಲಾಗುತ್ತಿದೆ. ಹಲವು ವರ್ಷಗಳಿಂದ ಕಂಪನಿ ಕಾರ್ಯನಿರ್ವಹಿಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement