ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕುರುಗೋಡು: ನೇಮಕ

Lingaraj Badiger
Updated On : 4 Jan 2014, 11:16 am

ಕುರುಗೋಡು: ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ಮಹೇಂದ್ರ ಜೋಶಿ ಅವರ ನಿರ್ದೇಶನದಂತೆ ಮುಖ್ಯ ಸಂಚಾಲಕ ವಿ.ಎಚ್. ಭೀಮಾಶಂಕರ ಅವರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಸಂಘಟನಾ ಕಾರ್ಯದರ್ಶಿಯನ್ನಾಗಿ ಕುರುಗೋಡು ಪಟ್ಟಣದ ಉಜ್ಜಾಳಪೇಟೆ ಕೆ. ಮಲ್ಲಿಕಾರ್ಜುನರನ್ನು ನೇಮಿಸಿದ್ದಾರೆ.
ಮಹಿಳೆ ಕಾಣೆ: ದೂರು
ಹೂವಿನಹಡಗಲಿ: ತಾಲೂಕಿನ ಮೀರಾಕೂರನಹಳ್ಳಿ ಗ್ರಾಮದ ದೇವಿಕಾ ರಾವುರತ್ ಪ್ರಶಾಂತ (20) ಎಂಬ ಮಹಿಳೆ ಕಾಣೆಯಾಗಿದ್ದಾಳೆ. ಮನೆಗೆಲಸ ಹಾಗೂ ವ್ಯಾಪಾರ ಮಾಡುತ್ತಿದ್ದಳು. ಡಿ. 27ರಂದು ಆರೋಗ್ಯ ಸರಿಯಿಲ್ಲ ಎಂದು ಗಂಡ ಪ್ರಶಾಂತನ ಜತೆಗೆ ಹೂವಿನಹಡಗಲಿಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾಳೆ. ನಂತರ ಅದೇ ಸಂಜೆ 4.30ರ ವೇಳೆಗೆ ಮೆಡಿಕಲ್ ಸ್ಟೋರ್‌ಗೆ ಮಾತ್ರೆ ತರಲು ಹೋದವಳು ನಾಪತ್ತೆಯಾಗಿದ್ದಾಳೆ ಎಂದು ಮಹಿಳೆಯ ತಂದೆ ಬಾರಿಕೆರ ಕೋಟೆಪ್ಪ ಹೂವಿನಹಡಗಲಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. 20 ವರ್ಷದ ರೇಣುಕಾ 4.5 ಅಡಿ ಎತ್ತರವಿದ್ದು, ಗೋದಿ ಮೈಬಣ್ಣ ಹೊಂದಿದ್ದಾಳೆ, ಕನ್ನಡ ಮಾತನಾಡುವ ಈಕೆ ದುಂಡನೆಯ ಮುಖ ಸಾಧಾರಣ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಕಪ್ಪು ಕೂದಲು, ಹಸಿರು ಬಣ್ಣದ ಚೂಡಿದಾರ ಧರಿಸಿದ್ದಾಳೆ. ಈ ಗುರುತಿನ  ಮಹಿಳೆ ಕಂಡು ಬಂದಲ್ಲಿ ಡಿವೈಎಸ್ಪಿ-9480803024, ಸಿಪಿಐ-9480803030 ಸಂಪರ್ಕಿಸಿ ಮಾಹಿತಿ ನೀಡುವಂತೆ ಪಿಎಸ್‌ಐ ಆಂಜನೇಯ ತಿಳಿಸಿದ್ದಾರೆ.
ಜಿಗುಪ್ಸೆ: ಆತ್ಮಹತ್ಯೆ
ಹೂವಿನಹಡಗಲಿ: ತಾಲೂಕಿನ ಮಾಗಳ ಗ್ರಾಮದ ಸುಣಗಾರ ಬಸವರಾಜ (48) ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಸುಣಗಾರ ಬಸವರಾಜ ಕೆಲ ದಿನಗಳಿಂದ ಟಿಬಿ ಮತ್ತು ಅಸ್ತಮಾ ಕಾಯಿಲೆಗಳಿಂದ ಬಳಲುತ್ತಿದ್ದ. ಅನೇಕ ಕಡೆಗಳಲ್ಲಿ ಚಿಕಿತ್ಸೆ ನೀಡಿದ್ದರೂ ಆರೋಗ್ಯ ಸುಧಾರಣೆಯಾಗಿಲ್ಲ. ಮೇಲಾಗಿ ಬಡತನ ಇದ್ದು, ಕೂಲಿ ಮಾಡಿಯೇ ಜೀವನ ನಡೆಸುತ್ತಿದ್ದ. ಈತನ ಹೆಂಡತಿ ಮತ್ತು ಮಗ ಇಬ್ಬರು ತಾಯಿಯ ತವರು ಮನೆ ಹಾವೇರಿ ಜಿಲ್ಲೆ ಬೇಳೂರು ಗ್ರಾಮದಲ್ಲಿದ್ದಾರೆ. 78 ವರ್ಷ ವಯಸ್ಸಿನ ತಾಯಿ ಆರೈಕೆಯಲ್ಲಿದ್ದ ಬಸವರಾಜ ನೋವು ತಾಳಲಾರದೇ ಗುರುವಾರ ರಾತ್ರಿ 10.30ರ ಸುಮಾರಿಗೆ ಬತ್ತ ಬಣವೆ ಮೇಲೆ ಹೋಗಿ ಕುಳಿತು ಬಣವಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಿತಾದರೂ ಬಸವರಾಜ ಮೃತಪಟ್ಟಿದ್ದ. ಸ್ಥಳಕ್ಕೆ ಹಿರೇಹಡಗಲಿ ಪೊಲೀಸ್  ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರೇಹಡಗಲಿ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement