ನಿರುದ್ಯೋಗಿಗಳಿಗೆ ತರಬೇತಿ
ಬಳ್ಳಾರಿ: ಭಾರತ ಸರ್ಕಾರದ ಎಂಎಸ್‌ಎಂಇ ಡೆವೆಲಪ್‌ಮೆಂಟ್ ಸಂಸ್ಥೆಯು ವಿದ್ಯಾವಂತ ಯುವ ನಿರುದ್ಯೋಗಿ ಅಭ್ಯರ್ಥಿಗಳಿಗಾಗಿ 5 ದಿನಗಳ ಅರೇಕಾ ಲೀಫ್ ಪ್ಲೇಟ್ಸ್ ಆಂಡ್ ಕಪ್ಸ್, ಪೇಪರ್ ಕಪ್ಸ್ ಆಂಡ್ ಪ್ಲೇಟ್ಸ್ ಉದ್ಯಮ ಕುರಿತು ತರಬೇತಿ ನೀಡಲಿದೆ. ತರಬೇತಿಯು ಜ. 27ರಿಂದ 31ರ ವರಗೆ ನಡೆಯಲಿದ್ದು, ಎಸ್ಸೆಸ್ಸೆಲ್ಸಿ, ಹೆಚ್ಚಿನ ವಿದ್ಯಾರ್ಹತೆ ಹೊಂದಿದ ಅರೇಕಾ ಲೀಫ್ ಪ್ಲೇಟ್ಸ್ ಆಂಡ್ ಕಪ್ಸ್, ಪೇಪರ್ ಕಪ್ಸ್ ಆಂಡ್ ಪ್ಲೇಟ್ಸ್ ಉದ್ಯಮವನ್ನು ಪ್ರಾರಂಭಿಸಲಿಚ್ಛಿಸುವವರು ತರಬೇತಿ ಪಡೆಯಬಹುದು. ಅರೇಕಾ ಲೀಫ್ ಪ್ಲೇಟ್ಸ್ ಆಂಡ್ ಕಪ್ಸ್, ಪೇಪರ್ ಕಪ್ಸ್ ಆಂಡ್ ಪ್ಲೇಟ್ಸ್ ತಯಾರಿಕೆ ಪ್ರಾಯೋಗಿಕ ತರಬೇತಿ ನೀಡುವುದಲ್ಲದೆ ತಯಾರಿಕೆಯಲ್ಲಿ ಬಳಸಬಹುದಾದ ಕಚ್ಚಾ ಸಾಮಗ್ರಿ, ಈ ಉದ್ಯಮದಲ್ಲಿ ಕಾಯ್ದುಕೊಳ್ಳಬಹುದಾದ ಗುಣಮಟ್ಟ ಮತ್ತಿತರ ವಿಷಯಗಳಲ್ಲಿ ತರಬೇತಿ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವಿವರಗಳನ್ನು ನಿರ್ದೇಶಕರು, ಎಂಎಸ್‌ಎಂಇ ಡೆವೆಲಪ್‌ಮೆಂಟ್ ಇನ್‌ಸ್ಟಿಟ್ಯೂಟ್, ರಾಜಾಜಿನಗರ, ಇಂಡಸ್ಟ್ರಿಯಲ್ ಎಸ್ಟೇಟ್, ಬೆಂಗಳೂರು-10 ಇವರಿಗೆ ಸಲ್ಲಿಸಬೇಕು, ಉಪ ನಿರ್ದೇಶಕ ವಿ.ವಿ. ಪ್ರಸಾದ್, ಅಸಿಸ್ಟೆಂಟ್ ಡೈರೆಕ್ಟರ್ ಕಂದಸ್ವಾಮಿ, ದೂರವಾಣಿ: 080-23151581-3, ಮೊ: 8971828533ಗೆ ಸಂಪರ್ಕಿಸಬಹುದು.
ದಾಳಿ: ಐವರ ಬಂಧನ
ಬಳ್ಳಾರಿ: ಇಸ್ಪೀಟ್ ಜೂಜಾಟ ಅಡ್ಡೆ ಮೇಲೆ ದಾಳಿ ಮಾಡಿ, ಐವರು ಆರೋಪಿಗಳನ್ನು ಬಂಧಿಸಿ, ಅವರಿಂದ ರು. 5300 ವಶಪಡಿಸಿಕೊಂಡಿರುವ ಘಟನೆ ಗುಡೇಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ತಿಮ್ಮನಹಳ್ಳಿಯಲ್ಲಿ ನಡೆದಿದೆ. ತಿಮ್ಮೇನಹಳ್ಳಿಯಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಗುಡುಕೋಡೆ ಪಿಎಸ್‌ಐ ನವೀನಗೌಡ ಹಾಗೂ ಸಿಬ್ಬಂದಿ ದಾಳಿ ಮಾಡಿ, ಗೊಮ್ಮಟೇಶ್ ಸೇರಿದಂತೆ 5 ಜನರನ್ನು ಬಂಧಿಸಿದ್ದಾರೆ. ಈ ಕುರಿತಾಗಿ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ: ಮೂವರ ಬಂಧನ
ಬಳ್ಳಾರಿ: ಇಸ್ಪೀಟ್ ಜೂಜಾಟ ಅಡ್ಡೆ ಮೇಲೆ ಕುರುಗೋಡು ಪೊಲೀಸರು ದಾಳಿ ಮಾಡಿ, ಮೂವರು ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ ರು. 6100 ವಶಪಡಿಸಿಕೊಂಡಿರುವ ಘಟನೆ ಕುರುಗೋಡಿನ ಇಂದಿರಾ ನಗರದಲ್ಲಿ ನಡೆದಿದೆ. ಕುರುಗೋಡಿನ ಇಂದಿರಾ ನಗರದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಸೋಮಶೇಖರ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ಮಾಡಿ, ಶೇಷಾದ್ರಿ ಸೇರಿ ಮೂವರನ್ನು ಬಂಧಿಸಿದ್ದಾರೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಡಿಕ್ಕಿ: ಬಾಲಕಿ ಸಾವು
ಬಳ್ಳಾರಿ: ಬಾಲಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಬೊಮ್ಮನಹಾಳ್ ರಸ್ತೆಯಲ್ಲಿ ನಡೆದಿದೆ. ಮೃತಳು ಬಳ್ಳಾರಿಯ ನಿವಾಸಿ ಶೇಕ್ಷಾವಲಿ ಪುತ್ರಿ ಜುಗನಿ (2 ವರ್ಷ, 2 ತಿಂಗಳು) ಎನ್ನಲಾಗಿದೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.