ಹಂಪಿ ಉತ್ಸವ: ಸಾಹಸ, ಎಕ್ಸ್‌ಟ್ರೀಮ್ ಕ್ರೀಡೆಗಳು
ಬಳ್ಳಾರಿ: ಹಂಪಿ ಉತ್ಸವ 2014ರ ಅಂಗವಾಗಿ ಜ. 10ರಿಂದ ಹಂಪಿಯಲ್ಲಿ ಏರ್ಪಡಿಸಿರುವ ಸಾಹಸ ಹಾಗೂ ಎಕ್ಸ್‌ಟ್ರೀಮ್ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಛಿಸುವ ಕ್ರೀಡಾಪಟುಗಳು ತಮ್ಮ ಹೆಸರನ್ನು ನಿಗದಿತ ದಿನಾಂಕದಂದು ಹೊಸಪೇಟೆ ಸಹಾಯಕ ಆಯುಕ್ತರ ಕಚೇರಿಯಲ್ಲಿಯರುವ ಹಂಪಿ ಉತ್ಸವ ಶಾಖೆಯಲ್ಲಿ ನೋಂದಾಯಿಸಬೇಕೆಂದು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಹಸ ಕ್ರೀಡಾ ಚಟುವಟಿಕೆಗಳು:ಈ ಚಟುವಟಿಕೆಯಲ್ಲಿ ವಿವಿಧ ಕ್ರೀಡೆಗಳ ವಿವರ ಇಂತಿದೆ.
ಅಕ್ಕ-ತಂಗಿಯರ ಗುಡ್ಡದ ಎದುರುಗಡೆ ಅಡ್‌ವೆಂಚರ್ ಕ್ಯಾಂಪ್ (3 ದಿನ ವಸತಿ ಸಹಿತ) ಹಾಗೂ ಪರಂಪರೆ ಚಾರಣ ಯಾತ್ರೆ (ಹೆರಿಟೇಜ್ ಟ್ರೆಕ್ಕಿಂಗ್) ಸ್ಪರ್ಧೆಗಳು ಜ. 10ರ ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು, ಈ ಕ್ರೀಡೆಯಲ್ಲಿ ಭಾಗವಹಿಸುವವರು ಅಂದು ಬೆಳಗ್ಗೆ 9 ಗಂಟೆಗೆ ವರದಿ ಮಾಡಿಕೊಳ್ಳಬೇಕು.
ಇತರ ಕ್ರೀಡೆಗಳು ನಡೆಯುವ ಸ್ಥಳ, ಸಮಯ ಇಂತಿದ್ದು, ದೋಣಿ ವಿಹಾರ (ಬೋಟಿಂಗ್) ಸ್ಪರ್ಧೆ-ಕಮಲಾಪುರ ಕೆರೆ, ಬೆಳಗ್ಗೆ 9ಕ್ಕೆ (ಬೆ. 8). ಬಿಸಿಗಾಳಿ ಬಲೂನ್ (ಹಾಟ್ ಏರ್ ಬಲೂನ್) ಸ್ಪರ್ಧೆ- ರಾಣಿ ಸ್ನಾನಗೃಹದ ಪಕ್ಕ, ಬೆ. 7ಕ್ಕೆ (ಬೆ. 6) ಕಮಲಾಪುರ ಪ್ರೌಢಶಾಲೆ ಹೆಲಿಪ್ಯಾಡ್‌ನಲ್ಲಿ ನಡೆಯಲಿರುವ ಆಗಸದಿಂದ ಹಂಪಿಯೆಡೆಗೆ (ಹಂಪಿ ಬೈ ಸ್ಕೈ) ಕ್ರೀಡೆಯು ಬೆಳಗ್ಗೆ 8ಕ್ಕೆ ಪ್ರಾರಂಭವಾಗಲಿದ್ದು, ಭಾಗವಹಿಸಲಿಚ್ಛಿಸುವವರು ಬೆಳಗ್ಗೆ 7ಕ್ಕೆ ವರದಿ ಮಾಡಿಕೊಳ್ಳಬೇಕು.
ಸಾಹಸ ಕ್ರೀಡೆಯ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಲು ನಿಗದಿಪಡಿಸಿರುವ ಶುಲ್ಕ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತದೆ. ಅಡ್ವೆಂಚರ್ ಕ್ಯಾಂಪಿನ ಸ್ಪರ್ಧೆ- 1200 (30 ಜನ) ಚಾರಣಯಾತ್ರೆ- ರು. 300 (50 ಜನ) ದೋಣಿ ವಿಹಾರ- 50 (4 ಜನ), ಹಾಟ್ ಏರ್ ಬಲೂನ್- ರು. 1,000 (4 ಜನ), ಹಂಪಿ ಬೈ ಸ್ಕೈ- 2000 (6 ಜನ). ಎಕ್ಸ್‌ಟ್ರೀಮ್ ಕ್ರೀಡೆಗಳಾದ ಪೇಂಟ್ ಬಾಲ್ ಬ್ಯಾಟಲ್ ಹಾಗೂ ಆಲ್ ಟೆರೆನ್ ವೆಹಿಕಲ್ ರೈಡ್ ಸ್ಪರ್ಧೆಗಳು ಜ. 10ರಂದು ರಾಣಿ ಸ್ನಾನಗೃಹದ ಪಕ್ಕದಲ್ಲಿ ಬೆಳಗ್ಗೆ 9ಕ್ಕೆ ನಡೆಯಲಿವೆ. ಪೇಂಟ್ ಬಾಲ್ ಬ್ಯಾಟಲ್ ಕ್ರೀಡೆಗಾಗಿ ರು. 1,000ಗಳ ಶುಲ್ಕ ನಿಗದಿಪಡಿಸಲಾಗಿದ್ದು, ಭಾಗವಹಿಸಿದ ಕನಿಷ್ಠ 12 ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಆಲ್ ಟೆರೆನ್ ವೆಹಿಕಲ್ ರೈಡ್ ಸ್ಪರ್ಧೆಯಲ್ಲಿ ಭಾಗವಹಿಸಿದ ಕನಿಷ್ಠ 300 ಕ್ರೀಡಾಳುಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧಾಳುಗಳು ಜ. 10ರಂದು ಬೆಳಗ್ಗೆ 8ಕ್ಕೆ ವರದಿ ಮಾಡಿಕೊಳ್ಳಬೇಕು.
ಹೆಚ್ಚಿನ ವಿವರಗಳಿಗೆ ಹಾಗೂ ಅರ್ಜಿ ನಮೂನೆ- ಷರತ್ತುಗಳನ್ನು ವೆಬ್‌ಸೈಟ್ ಢಿಢಿಢಿ.ಛಿಜಟಟಛ್ಠಣ.ಟ್ಝ್ಛಿ.್ಝಟಿ ಮತ್ತು ಢಿಢಿಢಿ.ಛಟಠ್ಝ್ಡಡಿಡಛಢಛ.್ಛ್ಟಟದಲ್ಲಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.