28ರಿಂದ ಬೃಹತ್ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ
ಕಂಪ್ಲಿ: ಸ್ಥಳೀಯ ಚಿಕ್ಕೇನಕೊಪ್ಪ ಚನ್ನವೀರ ಶರಣರ ಬಳಗದಿಂದ ಜ. 28, 29, 30ರಂದು 17ನೇ ಬೃಹತ್ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ ಏರ್ಪಡಿಸಿದೆ. ಜ. 28ರಂದು ಕಣ್ಣಿನ ಪರೀಕ್ಷೆ, 29, 30ರಂದು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಯಲಿದೆ. ಎಚ್. ಪ್ರಕಾಶಗೌಡರಿಂದ ಕಣ್ಣು ಪರೀಕ್ಷೆ, ಪ್ರತಿ ಗುರುವಾರ ಕೊಟ್ಟೂರೇಶ್ವರ ಹೆರಿಗೆ ಆಸ್ಪತ್ರೆಯಲ್ಲಿ ಸಂಜೆ 4ರಿಂದ 6ರ ವರೆಗೆ ಬಿಪಿ, ಶುಗರ್ ಪರೀಕ್ಷೆ ನಡೆಯಲಿದೆ. ಆಸಕ್ತರು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆಸರು ನೋಂದಾಯಿಸಿ. 300 ಜನರಿಗೆ ಉಚಿತ ಕಣ್ಣಿನ ಆಪರೇಷನ್ ಮಾಡಲಾಗುತ್ತದೆ. ಜವಳಿ ಚನ್ನಬಸಪ್ಪ, ಟಿ. ಕೊಟ್ರೇಶ್, ಜಿ. ಲಿಂಗನಗೌಡ್ರು, ಪಿ. ಮೂಕಯ್ಯಸ್ವಾಮಿ, ಅರವಿ ಬಸವನಗೌಡ, ಕೆ.ಎಂ. ಹೇಮಯ್ಯಸ್ವಾಮಿ, ಎಚ್. ಗವಿಸಿದ್ದಪ್ಪ, ವಾಲಿ ಕೊಟ್ರಪ್ಪ ಇದ್ದರು ಎಂದು ಬಳಗದ ಕಾರ್ಯದರ್ಶಿ ಡಾ. ಜಂಬುನಾಥಗೌಡ ತಿಳಿಸಿದ್ದಾರೆ.