ಅಂಗವಿಕಲ ವಿದ್ಯಾರ್ಥಿನಿಗೆಧನಸಹಾಯ
ಕಂಪ್ಲಿ: ಪಟ್ಟಣದ ಜಿ.ಕೆ.(ಗುರುಕೃಷ್ಣ) ಪೋಟೋ ಸ್ಟುಡಿಯೋದ ಹೊರಗೆ ಇಟ್ಟಿರುವ ಕಾಣಿಕೆ ಪೆಟ್ಟಿಗೆಯಲ್ಲಿನ ಸಾರ್ವಜನಿಕರು ಹಾಕಿದ ರು. 1,200, ಸ್ಟುಡಿಯೋ ಮಾಲೀಕ ಗುರುಕೃಷ್ಣ ಹಾಕಿದ ರು. 800 ಸೇರಿ ಒಟ್ಟು ರು. 2 ಸಾವಿರವನ್ನು ಕಂಪ್ಲಿ 4ನೇ ವಾರ್ಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 3ನೇ ತರಗತಿ ಬಡ ವಿದ್ಯಾರ್ಥಿನಿ ಕಂಪ್ಲಿ ಕಾವೇರಿಗೆ ನೀಡಲಾಯಿತು. ವಿದ್ಯಾರ್ಥಿನಿ ಕಂಪ್ಲಿ ಕಾವೇರಿ ತಾಯಿ ಹುಲಿಗೆಮ್ಮ, ತಂದೆ ರಾಮಣ್ಣ ಕೂಲಿ ಕೆಲಸ ಮಾಡುತ್ತಿದ್ದು, ಇವರಿಗೆ ಇರುವುದು ಒಬ್ಬಳೇ ಮಗಳು ಕಾವೇರಿ. ಪ್ರತಿವರ್ಷ ವಿಕಲಚೇತನ ಮಕ್ಕಳಿಗೆ ನಮ್ಮ ಕೈಲಾದಷ್ಟು ಧನ ಸಹಾಯ ಮಾಡಿ, ಅವರ ಬದುಕಿಗೆ ಸಹಕಾರ ಪ್ರೋತ್ಸಾಹಧನ ನೀಡಬೇಕು ಎನ್ನುವ ಸದುದ್ದೇಶ ಹೊಂದಿದ್ದೇನೆ ಎಂದು ಗುರುಕೃಷ್ಣ ತಿಳಿಸಿದರು.